ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಃ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಃ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕ
– ಡಾ. ಸಿದ್ದಲಿಂಗ ರಾಠೋಡ್
ರಾಷ್ಟ್ರೀಯ ಶಿಕ್ಷಣನೀತಿ -2020 ಈ ನೀತಿಯು 34 ವರ್ಷಗಳ ನಂತರ ಜಾರಿಗೊಳಿಸಿದೆ. ಹಳೆಯ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 1986 ಅನ್ನು ಬದಲಿಸುತ್ತದೆ.
2019 ರಲ್ಲಿ ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವಾಲಯವು ಹೊಸ ಶಿಕ್ಷಣ ನೀತಿ 2019 ಕರಡನ್ನು ಬಿಡುಗಡೆ ಮಾಡಿತ್ತು. ಅದರ ನಂತರ ಹಲವಾರು ಸಾವಜನಿಕ ಸಮಾಲೋಚನೆಗಳು ನಡೆದವು. ಆಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಉದ್ದೇಶದಿಂದ 2020 ರ ಜುಲೈ 29 ರಂದು ಕ್ಯಾಬಿನೆಟ್ ಹೊಸರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿತ್ತು.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಮೋದನೆಯ ಕುರಿತಂತೆ ಕಳೆದನಾಲ್ಕು ವರ್ಷಗಳಿಂದ ಗಂಭೀರವಾದ ಚಚೆಗಳಾಗಿವೆ. ಪ್ರಸ್ತುತ ಕೌಶಲ್ಯದ ಅವಶ್ಯಕತೆಗಳನ್ನು ಪರಿಗಣಿಸಲು ವಿನ್ಯಾಸಗೊಳಿಸಲಾಗಿದೆ. ಭಾರತೀಯ ಶಿಕ್ಷಣ ವ್ಯವಸ್ಥೆಯು ಶಿಕ್ಷಣದ ಮೇಲೆ ತನ್ನ ಹಿಂದಿನ ನೀತಿಗಳನ್ನು ಹೊಂದಿದ್ದು, ಶಿಕ್ಷಣದ ವಿಘಟಿತ ವ್ಯವಸ್ಥೆಯನ್ನು ಸೃಷ್ಟಿಸಲು ಕಾರಣವಾಗಿದೆ. ಆದಾಗ್ಯೂ ಇಡೀ ವ್ಯವಸ್ಥೆಯನ್ನು ಒಂದು ದೊಡ್ಡ ಛತ್ರಿಯೊಳಗೆ ತರುವುದು ಒಂದು ಸಮಸ್ಯೆಯಾಗಿದೆ. ಪ್ರಸ್ತುತ ಅದನ್ನೇ ಗುಣಪಡಿಸಲು ಪ್ರಯತ್ನಿಸಿದೆ.
ಸ್ವತಂತ್ರ ಸಂಸ್ಥೆಗಳು ಮತ್ತು ಸಂಯೋಜಿತ ಸ್ವಭಾವದ ಸಂಸ್ಥೆಗಳು ಮತ್ತು ಬಹು ಶಿಸ್ತೀಯ ಶಿಕ್ಷಣವನ್ನು ನೀಡಲು ಸಂಸ್ಥೆಗಳ ರಚನೆ ಮತ್ತು ಉನ್ನತೀಕರಣ ಪದವಿ ಪೂವ ಮತ್ತು ಸ್ನಾತಕೋತ್ತರ ಮತ್ತು ಸಂಶೋಧನಾ ಮಟ್ಟ ಎರಡಕ್ಕೂ ಅಂತರ ನಿಮಿ9ತ ನಮ್ಯತೆಯೊಂದಿಗೆ ಬಹು ಶಿಸ್ತೀಯ ಶಿಕ್ಷಣ ವ್ಯವಸ್ಥೆಯು ಪ್ರಮುಖ ಹೈಲೈಟ್ ಆಗಿದೆ. ಇದು ಶಾಲಾ ಹಂತದಿಂದಲೇ ವೃತ್ತಿ ಪರಕೌಶಲ್ಯ/ಕೌಶಲ್ಯ ವಧನೆಯ ಕೋಸ್ಗಳನ್ನು ಉತ್ತೇಜಿಸುವ ಮತ್ತು ನಿಮಿಸುವತ್ತ ಗಮನಹರಿಸುತ್ತದೆ. ಇದು ಉದ್ಯೋಗಾವಕಾಶಗಳ ಹೊರೆತಗ್ಗಿಸಬಹುದು ಮತ್ತು ಪ್ರತಿಭಾವಂತ ಉದ್ಯೋಗಿಗಳ ಪೂರೈಕೆಯನ್ನುಕಡಿಮೆ ಮಾಡುತ್ತದೆ. ಪರಿಣಿತರು ಸರಿಯಾಗಿ ಹೇಳುವಂತೆ ಅಕಾಡೆಮಿ ಅಭಿವೃಧ್ಧಿ ಪಡಿಸುವ ಪಠ್ಯ ಕ್ರಮವು ಇಲ್ಲಿಯವರೆಗೆ ಶಿಕ್ಷಕ ಕೇಂದ್ರಿಕೃತವಾಗಿರಬೇಕು.
ಈಗಾಗಲೇ ಕೇಂದ್ರ ಕ್ಯಾಬಿನೆಟ್ ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನುಮೋದಿಸಿದಂತೆ, ಇದು ದೇಶದ ಶಾಲಾ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪರಿವತನೆಯ ಸುಧಾರಣೆಗೆ ದಾರಿ ಮಾಡಿಕೊಡುವ ಗುರಿಯನ್ನು ಹೊಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾಥಿಗಳ ಜ್ಞಾನ, ಕೌಶಲ್ಯ, ವೃತ್ತಿಪರತೆ, ಪ್ರತಿಭೆಯನ್ನು ವಿದ್ಯಾಥಿಯಲ್ಲಿ ಬೆಳೆಯುವದಷ್ಟೇ ಅಲ್ಲದೆ, ಮೌಲ್ಯಗಳನ್ನು ಘೋಷಿಸುವ ಗುರಿ ಇಟ್ಟುಕೊಂಡಿದೆ. ರಾಷ್ತ್ರೀಯ ಶಿಕ್ಷಣ ನೀತಿ ಒಬ್ಬ ವಿದ್ಯಾಥಿಗೆ ಪರಿಪೂಣ ವ್ಯಕ್ತಿತ್ವ ರೂಪಿಸಿ ಕೊಡುವುದರ ಜೊತೆಗೆ ಭವಿಷ್ಯಕ್ಕೆ ಉತ್ತಮ ಉದ್ಯೋಗ ಕಂಡುಕೊಳ್ಳಲು ತುಂಬಾ ಸಹಕಾರಿಯಾಗಲಿದೆ. ರಾಷ್ಟ್ರದಲ್ಲಿ ಏಕರೂಪದಲ್ಲಿ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಷ್ತ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ಇದರ ನಡುವೆ ಕನಾಟಕದಲ್ಲಿಯೇ ಮೊದಲ ಬಾರಿಗೆ ಪದವಿ ಮಟ್ಟದಲ್ಲಿ ರಾಷ್ತ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿರುವದರಿಂದ ವಿದ್ಯಾಥಿಗಳಲ್ಲಿ ಹೊಸ ಚೈತನ್ಯ ಮೂಡುತ್ತಿದೆ.
ರಾಷ್ತ್ರೀಯ ಶಿಕ್ಷಣ ನೀತಿ(ಓಇP)-2020 ಯೋಜನೆಯ ಮೂಲದೃಷ್ಟಿಕೋನ ಎಲ್ಲರಿಗೂ ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಸಮಾನ ಮತ್ತು ರೋಮಾಂಚಕ ಜ್ಞಾನ ಸಮಾಜಕ್ಕೆ ಕೊಡುಗೆ ನೀಡುವ ಶಿಕ್ಷಣ ವ್ಯವಸ್ಥೆ. ಮೂಲಭೂತ ಹಕ್ಕುಗಳು, ಕತವ್ಯಗಳು ಮತ್ತು ಸಾವಿಂಧಾನಿಕ ಮೌಲ್ಯಗಳ ಬಗ್ಗೆ ಆಳವಾದ ಗೌರವವನ್ನು ಬೆಳೆಸುತ್ತದೆ, ಒಂದು ದೇಶದೊಂದಿಗೆ ಬಾಂಧವ್ಯ, ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಅದರ ಪಾತ್ರ ಬಹಳ ಮಹತ್ತರವಾದದ್ದು. ಮಾನವಹಕ್ಕುಗಳು, ಸುಸ್ಥಿರ ಅಭಿವೃಧ್ಧಿ ಜೀವನ ಮತ್ತು ಜಾಗತಿಕ ಯೋಗ ಕ್ಷೇಮದ ಜವಾಬ್ದಾರಿಯುತ ಬಧ್ಧತೆಯನ್ನು ಬೆಂಬಲಿಸುವ ಕೌಶಲ್ಯಗಳು, ಮೌಲ್ಯಗಳು ಸ್ವಭಾವಗಳನ್ನು ಹುಟ್ಟು ಹಾಕುತ್ತವೆ. ಈ ಮೂಲಕ ಜಾಗತಿಕ ನಾಗರಿಕನನ್ನು ಪ್ರತಿಬಿಂಬಿಸುತ್ತದೆ.
ಈ ರಾಷ್ಟ್ರೀಯ ಶಿಕ್ಷಣ ನೀತಿ, 21 ನೇ ಶತಮಾನದ ಮೊದಲ ಶಿಕ್ಷಣ ನೀತಿಯಾಗಿದೆ ಮತ್ತು ನಮ್ಮ ದೇಶದ ಅನೇಕ ಬೆಳೆಯುತ್ತಿರುವ ಅಭಿವೃಧ್ಧಿ ಆಕಾಂಕ್ಷೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಈ ನೀತಿ ಮತ್ತು ಅಡಳಿತ ಸೇರಿದಂತೆ ಶಿಕ್ಷಣ ರಚನೆಯ ಎಲ್ಲಾ ಅಂಶಗಳ ಪರಿಷ್ಕರಣೆಯನ್ನು ಪ್ರಸ್ತಾಪಿಸುತ್ತದೆ.
21 ನೇ ಶತಮಾನದ ಶಿಕ್ಷಣದ ಆಕಾಂಕ್ಷೆಗಳು ಮತ್ತು ಗುರಿಗಳನ್ನು ಹೊಂದಿದ್ದು, ಸುಸ್ಥಿರ ಅಭಿವೃಧ್ಧಿ ಗುರಿ ಸೇರಿದಂತೆ, ಭಾರತದ ಸಂಪ್ರದಾಯಗಳು ಮತ್ತು ಮೌಲ್ಯ ವ್ಯವಸ್ಥೆಗಳನ್ನು ನಿಮಿಸುತ್ತದೆ. 2040 ರ ವೇಳೆಗೆ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಸಾಧ್ಯತೆಗಳಿಗೆ ನಾಂದಿಯಾಡಲಿದೆ. ಅದು ಯಾವುದೇ ಸಾಮಾಜಿಕ ಮತ್ತು ಅಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲಾ ಕಲಿಕಾಥಿಗಳಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಹೊಂದಿದೆ.
ಅಂತಗತ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತ ಪಡಿಸಿಕೊಳ್ಳಲು ಮತ್ತು ಅಜೀವ ಕಲಿಕೆಯ ಅವಕಾಶಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ.
“2030 ರ ವೇಳೆಗೆ” ಕಳೆದ 35 ರಿಂದ 36 ವಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ನಿನ್ಯೂನತೆಗಳನ್ನು ನಿವಾರಿಸುವ ಈ ರಾಷ್ಟ್ರೀಯ ಶಿಕ್ಷಣ ನೀತಿಯು ಒಂದು ಔಷಧಿಯಾಗಿದೆ. ವೈಫಲ್ಯ ಅಥವಾ ಯಶಸ್ಸು ಸಂಪೂಣವಾಗಿ ಅನುಷ್ಠಾನ ಮತ್ತು ಮಧ್ಯಸ್ಥಗಾರರ ಅಂಗೀಕಾರವನ್ನು ಅವಲಂಬಿಸಿದೆ. ಇದಕ್ಕಾಗಿ ನಾವು ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಕೈಜೋಡಿಸಬೇಕಾಗಿದೆ. ಇದರಲ್ಲಿ ವಿದ್ಯಾಥಿಗಳಿಗೆ ವಿಷಯಗಳ ಆಯ್ಕೆ ಮಾಡಲು ಮುಕ್ತ ಅವಕಾಶವಿರುತ್ತದೆ. ಮೊದಲು ಮೂರು ವಷ ಅಧ್ಯಯನಕ್ಕೆ ಅವಕಾಶವಿತ್ತು. ಅನಂತರ ಸ್ನಾತಕೋತ್ತರ ಎರಡು ವಷ ಬಿಇಡಿ ಮಾಡಬೇಕಾಗಿತ್ತು. ಆದರೆ ಈಗ ನಾಲ್ಕು ವಷದ ಆನಸ್ ಪದವಿ ನೀಡಲಾಗುತ್ತಿದೆ. ಇನ್ನು ಎಂಟು ಸೆಮೆಸ್ಟರಗಳಿದ್ದು, ಆನಸ್ ಬಳಿಕ ನೇರವಾಗಿ ಪಿ.ಎಚ್ಡಿಗೆ ಪ್ರವೇಶ ಪಡೆಯಬಹುದು, ಇದರ ಜೊತೆಗೆ ಕೌಶಲ್ಯ ಹಾಗೂ ಮೌಲ್ಯ ಆಧಾರಿತ ಶಿಕ್ಷಣವನ್ನು ನೀಡುತ್ತದೆ. ಇಂತಹ ಹೊಸ ಶಿಕ್ಷಣ ನೀತಿಯ ಬಗ್ಗೆ ಯಾವುದೇ ಗೊಂದಲಬೇಡ. ಈ ನೀತಿಯ ಗುಣಮಟ್ಟದ ಶಿಕ್ಷಣದ ಕಲಿಕೆಯ ಆಶಯಗಳನ್ನು ಅಥೈಸಿಕೊಂಡು ಹೊಸ ಶಿಕ್ಷಣ ನೀತಿಯನ್ನು ಸ್ವಾಗತಿಸೋಣ.
-ಡಾ. ಸಿದ್ಧಲಿಂಗ ರಾಠೋಡ್
ಮುಖ್ಯಸ್ಥರು, ವಾಣಿಜ್ಯಶಾಸ್ತ್ರ ವಿಭಾಗ
ಸರಕಾರಿ ಪ್ರಥಮ ದಜೆ ಕಾಲೇಜು, ಕೆಂಭಾವಿ
ತಾ. ಸುರಪುರಜಿ. ಯಾದಗಿರ
ಮೊ. 9964718579.