ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ- ನೀಲ ನಕ್ಷೆ ರೆಡಿ
ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ- ನೀಲ ನಕ್ಷೆ ರೆಡಿ
ಬೆಂಗಳೂರಃ ಗ್ರಾಮೀಣ ಭಾಗದ ಜನರ ಆರೋಗ್ಯ ಸುಧಾರಣೆಗೆ ಸಕಲ ಸೌಲಭ್ಯ ಕಲ್ಪಿಸುವ ಹಿನ್ನೆಲೆ ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪ್ರಾಥಮೀಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ನೀಲ ನಕ್ಷೆ ಸಿದ್ಧ ಪಡಿಸಿದ್ದು ಉತ್ತಮ ಸೌಕರ್ಯ ಕಲ್ಪಿಸುವ ಆಸ್ಪತ್ರೆ ನಿರ್ಮಾಣಕ್ಕೆ ಸಕಲ ಸಿದ್ಧತೆ ಮಾಡಿದೆ.
ಇದು ಗ್ರಾಮೀಣ ಭಾಗದ ಜನರಿಗೆ ಸಿಹಿಸುದ್ದಿ ಎನ್ನಬಹುದು. ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಎರಡು ಎಕರೆ ಜಾಗ ಗುರುತಿಸಲಾಗುತ್ತಿದ್ದು, ಅದರಲ್ಲಿ 20 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಸೇರಿದಂತೆ ಉಚಿತವಾಗಿ ಶುಗರ್, ಬಿಪಿ ಟೆಸ್ಟಿಂಗ್ ಮತ್ತು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿವೆ.
ಗ್ರಾಮೀನ ಜನರಿಗೆ 24 ಗಂಟೆಗಳ ಕಾಲ ಗುಣಮಟ್ಟ ಆರೋಗ್ಯ ಸೇವೆ ದೊರಕಿಸುವ ಮಹತ್ವದ ಯೋಜನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪ್ರಾತ್ಯಕ್ಷಿಕೆ ಯೋಜನೆ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದ ಸಚಿವ ಡಾ.ಸುಧಾಕರ.
ರಾಜ್ಯದ 2380 ಪ್ರಾಥಮಿಕ ಕೇಂದ್ರಗಳಿಗೆ ಆಧುನಿಕತೆಯ ಸ್ಪರ್ಶ ನೀಡಲಿದ್ದು, ಮಹಿಳಾ ವೈದ್ಯರು, ಆಯುಷ್ ವೈದ್ಯರು ಸೇರಿದಂತೆ ಮೂರ್ನಾಲ್ಕು ಜನ ವೈದ್ಯರ ಸೇವೆ ಲಭ್ಯವಿರಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.