ವಿನಯ ವಿಶೇಷ

DRDOದಿಂದ ಡ್ರೋಣ್ ಮಾದರಿಯ ರುಸ್ತುಂ-2 ಪರೀಕ್ಷಾರ್ಥ ಹಾರಾಟ ಯಶಸ್ವಿ!

ಬೆಂಗಳೂರು : ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದ ಸಮೀಪದ ಡಿಆರ್ ಡಿಓ – ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಇಂದು ರುಸ್ತುಂ-2 ಪರೀಕ್ಷಾರ್ಥ ಹಾರಾಟ ನಡೆಸಿದೆ. ಇಂದು ಬೆಳಗ್ಗೆ ಡಿಆರ್ ಡಿಓ ಆವರಣದಲ್ಲಿನ ಏರೋನೆಟಿಕಲ್ ಟೆಸ್ಟ್ ರೇಂಜ್ ನಲ್ಲಿ 7:30ರ ಸುಮಾರಿಗೆ ರುಸ್ತುಂ-2 ಪರೀಕ್ಷಾರ್ಥ ಹಾರಾಟ ನಡೆಸಲಾಗಿದ್ದು ಸಂಶೋಧನೆ ಯಶಸ್ವಿ ಆಗಿದೆ ಎಂದು ತಿಳಿದು ಬಂದಿದೆ.

ರುಸ್ತುಂ-2 ಸರಳ ಬಳಕೆಗೆ ಯೋಗ್ಯವಾಗಿದ್ದು ಹೈಯರ್ ಪವರ್ ಇಂಜಿನ್ ನ್ನು ಒಳಗೊಂಡಿದೆ. ಡ್ರೋಣ್ ಮಾದರಿಯ ಚಾಲಕ ರಹಿತ ಫ್ಲೈಟ್ ಇದಾಗಿದ್ದು ರಕ್ಷಣಾ ಇಲಾಖೆಗೆ ಉಪಯುಕ್ತವಾಗಿದೆ. ಇದೇ ಮೊದಲ ಬಾರಿಗೆ ಪರೀಕ್ಷೆಗೊಳಪಡಿಸಿದ ಅತ್ಯಾಧುನಿಕ ರುಸ್ತುಂ-2 ಇದಾಗಿದೆ ಎಂದು ತಿಳಿದು ಬಂದಿದೆ. ವಿಶಿಷ್ಟವಾದ ರುಸ್ತುಂ-2 ವಿಶ್ವಮಟ್ಟದಲ್ಲಿ ಭಾರತದ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಲಿದೆ.

 

Related Articles

Leave a Reply

Your email address will not be published. Required fields are marked *

Back to top button