DRDO ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ.!
DRDO ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ.!
ವಿವಿ ಡೆಸ್ಕ್ಃ ಇಂದು ಭಾರತ ಹೊಸ ಮೈಲಿಗಲ್ಲನ್ನು ಹಾಕಿದೆ. ಹೈಪರ್ಸಾನಿಕ್ ಟೆಸ್ಟ್ ಪ್ರಾತ್ಯಕ್ಷಿಕೆ ವಾಹನವನ್ನು ಯಶಸ್ವಿಯಾಗಿ ಹಾರಾಟ ನಡೆಸಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಡಿಆರ್ಡಿಓ ಗೆ ಟ್ವಿಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಸಂಪೂರ್ಣ ಸ್ವದೇಶಿಯಾಗಿ ಅಭಿವೃದ್ಧಿ ಪಡಿಸಿದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ವೆಹಿಕಲ್ ಅಂದರೆ ಶಬ್ದಾತೀತ ತಂತ್ರಜ್ಞಾನ ಪ್ರಾತ್ಯಕ್ಷಿಕೆ ವಾಹನ ಪರೀಕ್ಷಾರ್ಥ ಹಾರಾಟ ಸೋಮವಾರ ಯಶಸ್ವಿಯಾಗಿದೆ. ಇದು ಮುಂದಿನ ಭವಿಷ್ಯದ ವೈಮಾನಿಕ ವೇದಿಕೆಗಳಿಗೆ, ದೂರಗಾಮಿ ಕ್ಷಿಪಣಿ ವ್ಯವಸ್ಥೆಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.
ಅಲ್ಲದೆ ಜಗತ್ತಿನಲ್ಲಿ ಕೆಲವೇ ಕೆಲವು ದೇಶಗಳು ಇಂತಹ ಸಾಮರ್ಥ್ಯ ವನ್ನು ಹೊಂದಿದ್ದು ಅದರಲ್ಲಿ ಇಂದು ಭಾರತವು ಸೇರ್ಪಡೆಯಾಗಿರುವದು ಹೆಮ್ಮೆ ತಂದಿದೆ.
ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಮತ್ತು ಯಶಸ್ವಿಯಾಗಿ ಪರೀಕ್ಷಿಸಲು ಭಾರತ ನಾಲ್ಕನೇ ದೇಶವಾಗಿ ಹೊರ ಹೊಮ್ಮಿದೆ ಎಂದು ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿ ತಂಡದ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ.