ಪ್ರಮುಖ ಸುದ್ದಿ
ವ್ಯಾಪಾರಿಗಳೇ ಹುಷಾರ್! ಗ್ರಾಹಕರ ವೇಷದಲ್ಲೇ ಬರ್ತಾರೆ ಖದೀಮರು…
ಬೀದರ: ಅವರೆಲ್ಲಾ ಮದುವೆ ಸಂಭ್ರಮಕ್ಕೆ ಬಟ್ಟೆ ಕೊಂಡುಕೊಳ್ಳುವ ಗ್ರಾಹಕರ ಸೋಗಿನಲ್ಲಿ ಬಂದಿದ್ದರು. ಅವರ ವೇಷಭೂಷಣ ಕಂಡಿದ್ದ ಅಂಗಡಿಯವರಿಗೆ ಅವರ ಮೇಲೆ ಅನುಮಾನ ಪಡಲು ಕಾರಣವೇ ಇರಲಿಲ್ಲ. ಅಷ್ಟೊಂದು ಲಕ್ಷಣವಾಗಿ ಬಂದಿದ್ದರು, ಆತ್ಮೀಯರಂತೆ, ಖಾಯಾಂ ಗ್ರಾಹಕರಂತೆ ಮಾತನಾಡಿಸಿದ್ದರು ಖದೀಮರು. ಬಟ್ಟೆ ತೆಗೆದುಕೊಳ್ಳುವ ನೆಪದಲ್ಲಿ ಅಂಗಡಿ ತುಂಬಾ ಓಡಾಡಿದ್ದರು. ಕೊನೆಗೆ ಮಾಲೀಕನನ್ನು ಯಾಮಾರಿಸಿ ಗಲ್ಲಾಪೆಟ್ಟಿಗೆಯಲ್ಲಿದ್ದ ಐದು ಸಾವಿರ ರೂಪಾಯಿ ನಗದು ಕದ್ದು ಎಸ್ಕೇಪ್ ಆಗಿದ್ದಾರೆ.
ಸಂಜೆ 5ಗಂಟೆ ಸುಮಾರಿಗೆ ನಗರದ ಮೋಹನ್ ಮಾರ್ಕೇಟ್ ಏರಿಯಾದಲ್ಲಿರುವ ಓಂಕಾರ್ ಡ್ರೆಸಸ್ ನಲ್ಲಿ ಕಳ್ಳತನ ನಡೆದಿದೆ. ಬಳಿಕ ಎಚ್ಚೆತ್ತುಕೊಂಡ ಅಂಗಡಿ ಮಾಲೀಕರು, ಮತ್ತು ಸಿಬ್ಬಂದಿ ಹೊರಹೋಗಿ ನೋಡುವಷ್ಟರಲ್ಲಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಅಂಗಡಿಯ ಸಿಸಿಟೀವಿಯಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.