ಸಿಬಿ ಶಾಲಾ ಮೈದಾನದಲ್ಲಿ ಖಾಸಗಿ ವೈದ್ಯರ ಸೇವೆ
ಶಹಾಪುರಃ ಕೊರೊನಾ ಹಾವಳಿಗೆ ಜನ ತತ್ತರಿಸಿದೆ. ಊಟ ಉಪಚಾರ ಸೇರಿದಂತೆ ಸಾಮಾನ್ಯ ಆರೋಗ್ಯ ಪರೀಕ್ಷೆಗೂ ಮಕ್ಕಳು, ವೃದ್ಧರು ಪರಿತಪಿಸುವಂತಾಗಿದೆ. ಅದನ್ನು ನೀಗಿಸುವ ಹಿನ್ನೆಲೆ ನಗರದ ಹಲವಾರು ಜನ ಖಾಸಗಿ ವೈದ್ಯರು ಇಲ್ಲಿನ ಚರಬಸವೇಶ್ವರ ಶಾಲಾ ಆವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೇವೆಯಲ್ಲಿ ನಿರತರಾಗಿದ್ದಾರೆ.
ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವದು ಕಷ್ಟಕರ ಹಿನ್ನೆಲೆಯಲ್ಲಿ ಎಲ್ಲಾ ನಗರದ ಖಾಸಗಿ ವೈದ್ಯರು ಚರಬಸವೇಶ್ವರ ಶಾಲಾ ಆವರಣದಲ್ಲಿ ಲಾಕ್ ಡೌನ್ ಮಧ್ಯೆಯು ಸೇವೆ ಸಲ್ಲಿಸುತ್ತಿರುವದು ಮಾದರಿಯಾಗಿದೆ.
ಕೊರೊನಾ ತಡೆಗೆ ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸುವ ಜೊತೆಗೆ ಜನರ ಆರೋಗ್ಯ ಸುಧಾರಣೆಗೆ ಶ್ರಮವಹಿಸುತ್ತಿದ್ದಾರೆ. ಅಲ್ಲದೆ ಚಿಕಿತ್ಸೆಗೆ ಎಂದು ಬರುವ ರೋಗಿಗಳಿಗೆ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯವೆಂದು ಯುವ ಮುಖಂಡ ಗುರು ಕಾಮಾ ತಿಳಿಸಿದ್ದಾರೆ.
ತಾಲೂಕಿನ ಹಲವಾರು ಗ್ರಾಮಗಳಿಂದ ಸಾಮಾನ್ಯ ಅನಾರೋಗ್ಯದಿಂದ ಬರುವ ಜನರಿಗೆ ಇದು ಅನುಕೂಲವಾಗಿದೆ. ಎಲ್ಲಾ ಖಾಸಗಿ ವೈದ್ಯರು ಒಂದಡೆ ಸುಲಭವಾಗಿ ಸಿಗುತ್ತಿರುವದರಿಂದ ಅನುಕೂಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ನಗರದ ಮಕ್ಕಳ ತಜ್ಞ ವೈದ್ಯರಾದ ಡಾ.ಸುದತ್ ದರ್ಶನಾಪುರ, ಡಾ,ವೆಂಕಟೇಶ ಟೊಣಪೆ ಮತ್ತು ಡಾ,ಮುಂಬೈ ಹಾಗೂ ಇತರೆ ವೈದ್ಯರು ನಗರದಲ್ಲಿ ಸೇವಾ ನಿರತರಾಗಿರುವದರಿಂದ ಲಾಕ್ ಡೌನ್ ಸಮಯದಲ್ಲಿ ಜನರಿಗೆ ಅನುಕೂಲವಾಗಿದೆ. ಗ್ರಾಮೀಣ ಬಾಗದ ಜನರು ಮಕ್ಕಳಿಗೆ ಜ್ವರ, ನೆಗಡಿ ಎಂದು ಪರದಾಡುತ್ತಿದ್ದರು. ಇದೀಗ ಮಕ್ಕಳ ವೈದ್ಯರ ಸೇವೆಯಿಂದ ತುಂಬ ಅನುಕೂಲವಾಗಿದೆ.
-ಗುರು ಕಾಮಾ. ಶಹಾಪುರ.