ಪ್ರಮುಖ ಸುದ್ದಿ
DRUGS CASE- ನಟಿ ಸಂಜನಾ 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ.!
ನಟಿ ಸಂಜನಾ 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ.!
ವಿವಿ ಡೆಸ್ಕ್ಃ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾಳನ್ನು ಸಿಸಿಬಿ ಪೊಲೀಸರು 5 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಸೆ.8 ರಂದು ಬೆಳಗ್ಗೆ ನಟಿ ಸಂಜನಾಳ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾಳ ಇಬ್ಬರು ಆಪ್ತರನ್ನು ಈಗಾಗಲೇ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಇನ್ನೋರ್ವ ನಟಿ ರಾಗಿಣಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ಮಾಫಿಯಾ ಪ್ರಕರಣ ಕೆನ್ನಾಲಿಗೆ ಇನ್ನೂ ಬಹುದೂರ ಚಾಚಿ ಕೊಂಡಿದ್ದು, ಡ್ರಗ್ಸ್ ಪ್ರಕರಣದಡಿ ಇನ್ನು ಸಾಕಷ್ಟು ಜನರು ವಿಚಾರಣೆಗೊಳಪಡುವ ಸಾಧ್ಯತೆ ಇದೆ.
ಸಿಸಿಬಿ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಕೈಗೊಂಡಲ್ಲಿ ರಾಜಕಾರಣಿ, ದೊಡ್ಡದೊಡ್ಡ ನಟ ನಟಿಯರ ಮಕ್ಕಳು, ದಾರಾವಹಿ ನಟರು ಸಾಕಷ್ಟು ಸಂಖ್ಯೆಯಲ್ಲಿ ಜನರು ಸಿಲುಕುವ ಸಾಧ್ಯತೆ ಎನ್ನಲಾಗಿದೆ.