DRUGS ಆರೋಪ, ಅವಮಾನಃ ನಟಿ ರಾಗಿಣಿ ಪೋಷಕರಿಂದ ಫ್ಲ್ಯಾಟ್ ಮಾರಾಟಕ್ಕೆ ಸಿದ್ಧ
ಅವಮಾನಃ ನಟಿ ರಾಗಿಣಿ ಪೋಷಕರಿಂದ ಫ್ಲ್ಯಾಟ್ ಮಾರಾಟಕ್ಕೆ ಸಿದ್ಧ
ಬೆಂಗಳೂರಃ 3 ಬಿಎಚ್ ಕೆ ಫ್ಲ್ಯಾಟ್ ಹೊಂದಿದ್ದ ಡ್ರಗ್ಸ್ ಮಾಫಿಯಾ ಪ್ರಕರಣದಡಿ ಆರೋಪ ಹೊತ್ತು ಪರಪ್ಪನ ಅಗ್ರಹಾರಕ್ಕೆ ಹೋದ ನಟಿ ರಾಗಿಣಿ ತಂದೆ ರಾಕೇಶ ದ್ವಿವೇದಿ ತಾವು ನೆಲಿಸಿದ್ದ ಫ್ಲ್ಯಾಟ್ ಮಾರಾಟ ಮಾಡಿ ಬೇರಡೆ ನೆಲೆಸಲು ನಿರ್ಣಯಿಸಿರುವ ಹುನ್ನೆಲೆ 2 ಕೋಟಿಗೆ ಫ್ಲ್ಯಾಟ್ ಮಾರಾಟ ಮಾಡಲು ಮುಂದಾಗಿದ್ದಾರೆ.
ಭಾರತೀಯ ಸೇನೆ ಯಲ್ಲಿ ಕೆಲಸಮಾಡಿದ ನಟಿ ರಾಗಿಣಿ ತಂದೆ ಓರ್ವ ಶಿಸ್ತುಬದ್ಧ ಯೋಧ ಹೀಗಾಗಿ ರಾಗಿಣಿ ಡ್ರಗ್ಸ್ ಮಾಫಿಯಾ ಪ್ರಕರಣ ಆರೋಪದ ಮೇರೆಗೆ ಜೈಲಿಗೆ ತೆರಳಿರುವದನ್ನು ಅರಗಿಸಿಕೊಳ್ಳಲಾಗದೆ, ಅವಮಾನಗೊಂಡು ಈ ಫ್ಲ್ಯಾಟ್ ನಲ್ಲಿ ವಾಸಿಸಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಅದನ್ನು ಸೇಲ್ ಗೆ ಇಟ್ಟಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಅನ್ನೋದು ಇದಕ್ಮೆ. ರಾಗಿಣಿ ಬದುಕು ಚಿತ್ರಾನ್ನವಾಯಿತಾ.? ಅಣಿ ತಪ್ಪಿದರೆ ಬಾರಣೆ ತಪ್ಪಿತು ಎಂಬ ಗಾದೆ ಮಾತಿನಂತೆ, ರಾಗಿಣಿ ಬದುಕಿನಲ್ಲಿ ಬೀಸಿದ ಬಿರುಗಾಳಿ ಇದೀಗ ಅವರ ಬದುಕನ್ನೆ ಚಿತ್ರಾನ್ನವಾಗಿಸುತ್ತಿದೆ. ನಟಿ ರಾಗಿಣಿ ಜೈಲಿನತ್ತ ಸಾಗಿದರೆ, ಪೋಷಕರು ಮನೆ ಮಾರಾಟ ಮಾಡಿ ಬೇರಡೆ ನೆಲೆಸಲು ಮನಸ್ಸು ಮಾಡಿದ್ದಾರೆ. ಎಲ್ಲವು ವಿಧಿಯಾಟ ಅಲ್ಲವೇ.?