ಪ್ರಮುಖ ಸುದ್ದಿ

ಪೊಲೀಸ್ ವೇಷದಲ್ಲಿ ವಸೂಲಿಗಿಳಿದ ಖತರ್ನಾಕ್ ಆಸಾಮಿ ಅರೆಸ್ಟ್!

ಪೊಲೀಸ್ ಸಮವಸ್ತ್ರವನ್ನೇ ಕದ್ದು ವಸೂಲಿಗಿಳಿದಿದ್ದ ವಂಚಕ!

ಕೊಪ್ಪಳ: ಇಂದಿಗೂ ಖಾಕಿಗೆ ತನ್ನದೇ ಆದ ಗತ್ತು, ಗೌರವ ಇದೆ. ಖಾಕಿಧಾರಿಗಳಿಗೆ ಸಮಾಜ ಗೌರವಿಸುತ್ತದೆ. ಅಂತೆಯೇ ಖಾಕಿಧಾರಿ ಪೊಲೀಸರು ಹಣ ವಸೂಲಿ ಮಾಡುತ್ತಾರೆ. ದುಡ್ಡು ಕೈಗಿಟ್ಟರೆ ಸಾಕು ಏನೇ ತಪ್ಪು ಮಾಡಿದ್ದರೂ ಬಿಟ್ಟು ಕಳುಹಿಸುತ್ತಾರೆಂಬ ವಿಷಯ ಕೂಡ ಜನಮಾನಸದಲ್ಲಿ ಸಹಜವಾಗಿ ಮೂಡಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಕೊಪ್ಪಳದಲ್ಲೊಬ್ಬ ಖತರ್ನಾಕ್ ಆಸಾಮಿ ಪೊಲೀಸರ ಸಮವಸ್ತ್ರವನ್ನೇ ಕದ್ದಿದ್ದಾನೆ. ಅಲ್ಲದೆ ಅದೇ ಸಮವಸ್ತ್ರ ಹಾಕಿಕೊಂಡು ಪೊಲೀಸ್ ವೇಷದಲ್ಲಿ ಹಣ ವಸೂಲಿ ದಂಧೆ ನಡೆಸಿದ್ದಾನೆ.

ಕೊಪ್ಪಳ ತಾಲೂಕಿನ ದಾಬಾ ಹೋಟೆಲ್‌ಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದನಂತೆ. ರಾತ್ರಿ ವೇಳೆ ಪೊಲೀಸ್ ವೇಷದಲ್ಲಿ ಫೀಲ್ಡಿಗಿಳಿಯುತ್ತಿದ್ದ ಕೊಪ್ಪಳ ಮೂಲದ ಸಮೀರ್ ಹೀಗೆ ಅದೆಷ್ಟು ದಿನಗಳಿಂದ ವಸೂಲಿ ನಡೆಸಿದ್ದನೋ ಗೊತ್ತಿಲ್ಲ. ಇಂದು ಮಾತ್ರ ಅವನ ಗ್ರಹಚಾರ ಕೆಟ್ಟಿತ್ತು. ಅನುಮಾನಗೊಂಡ ದಾಬಾದವರು ಅಳವಂಡಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಆಗ ಪೊಲೀಸರು ವಿಚಾರಣೆ ನಡೆಸಿದಾಗ ಸಮೀರ್ ಧರಿಸಿದ್ದ ಪೊಲೀಸ್ ಸಮವಸ್ತ್ರವೂ ಕಳ್ಳತನ ಮಾಡಿದ್ದು ಎಂಬುದು ಬಯಲಾಗಿದೆ. ಕಳವಾಗಿದ್ದ ಪೊಲೀಸಪ್ಪನ ಸಮವಸ್ತ್ರ ಕೊನೆಗೂ ಸಿಕ್ಕಿದೆ. ಸದ್ಯ ಸಮೀರ್ ಈಗ ಅಳವಂಡಿ ಪೊಲೀಸರ ಅತಿಥಿಯಾಗಿದ್ದಾನೆ.

Related Articles

Leave a Reply

Your email address will not be published. Required fields are marked *

Back to top button