ಯೋಗ ದಿನಾಚರಣೆ ಜಾಗೃತಿ ಜಾಥಾ
ಯೋಗ ಜಾಗೃತಿ ಜಾಥಾಕ್ಕೆ ಚಾಲನೆ
ಯಾದಗಿರಿಃ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜೂನ್ 21ರಂದು ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಚಾಲನೆ ನೀಡಿದರು.
ಯೋಗ ದಿನಾಚರಣೆಯಂದು ಶುಕ್ರವಾರ ಬೆಳಿಗ್ಗೆ 6.45ರಿಂದ 7 ಗಂಟೆಯವರೆಗೆ ಧ್ಯಾನ, ಭಾರತ ಸರ್ಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ 7ರಿಂದ 7.55 ಗಂಟೆಯವರೆಗೆ ಯೋಗ ಮಾಡಲಾಗುವುದು. ನಂತರ 8ರಿಂದ 8.30 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ಇರುತ್ತದೆ.
ತದನಂತರ 8.30ರಿಂದ ಉಪಾಹಾರ ವಿತರಣೆ ಮಾಡಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಪ್ರಕಾಶ ಎಚ್.ರಾಜಾಪುರ ಮಾಹಿತಿ ನೀಡಿದರು.
ನಗರಸಭೆ ಪೌರಾಯುಕ್ತರಾದ ರಮೇಶ ಸುಣಗಾರ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕೆ.ವಿಶ್ವನಾಥ, ಪತಂಜಲಿ ಯೋಗ ಸಮಿತಿಯ ಅನಿಲ್ ಗುರೂಜಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಚನ್ನಬಸಪ್ಪ ಕುಳಗೇರಿ, ಡಾ.ರಮೇಶ ಸಜ್ಜನ್ ಪ್ರಮೋದ್, ರಾಮರಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.