ಪ್ರಮುಖ ಸುದ್ದಿ
ನಿಗೂಢ ನಾಪತ್ತೆ : ಅರಣ್ಯದಲ್ಲಿ ಡಿವೈಎಸ್ಪಿ, ಇನ್ಸ್ ಪೆಕ್ಟರ್ ನಾಪತ್ತೆ!
ಕಾರವಾರ : ಕೋಂಬಿಂಗ್ ಕಾರ್ಯಾಚರಣೆಗಾಗಿ ನಿನ್ನೆ ಯಲ್ಲಾಪುರ ತಾಲೂಕಿನ ಲಕ್ಕಿ ಮನೆ ಗ್ರಾಮಕ್ಕೆ ತೆರಳಿದ್ದ ಡಿವೈಎಸ್ಪಿ ಶಂಕರ್ ಮಾರಿಯಾಳ್ ಹಾಗೂ ಇನ್ಸಪೆಕ್ಟರ್ ರವಿಕುಮಾರ್ ಹಿಂದಿರುಗುವ ವೇಳೆ ಕೈಗಾ ಸಮೀಪದ ಅರಣ್ಯದಲ್ಲಿ ದಾರಿತಪ್ಪಿ ನಾಪತ್ತೆಯಾದ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ನೇತೃತ್ವದಲ್ಲಿ ನಾಪತ್ತೆಯಾದ ಅಧಿಕಾರಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ಶೋಧ ಕಾರ್ಯ ಆರಂಭಿಸಲಾಗಿದ್ದು ಈವರೆಗೆ ಇಬ್ಬರೂ ಅಧಿಕಾರಿಗಳು ಪತ್ತೆ ಆಗಿಲ್ಲ ಎಂದು ತಿಳಿದು ಬಂದಿದೆ.