ಪ್ರಮುಖ ಸುದ್ದಿ

ಈಜಿಪ್ತ್ ನಲ್ಲಿ ಪುರಾತನ ಮಮ್ಮಿ ಪತ್ತೆ.!

ಈಜಿಪ್ತ್ ನಲ್ಲಿ ಪುರಾತನ ಮಮ್ಮಿ ಪತ್ತೆ.!

ವಿವಿ ಡೆಸ್ಕ್ಃ ಸುಮಾರು 2500 ವರ್ಷಗಳ‌ ಪುರಾತನ ಮಮ್ಮಿ ಈಜಿಪ್ತಿನಲ್ಲಿ ಪತ್ತೆಯಾಗಿದೆ. ಈ ಪುರಾತನ ಮಮ್ಮಿ (ಶವ ಪೆಟ್ಟಿಗೆ) ನೋಡಲು ಆಕರ್ಷಕವಾಗಿದ್ದು, ಮಮ್ಮಿ ಮೇಲೆ ಡಿಸೈನ್ ಇದೆ. ಅಲ್ಲದೆ ಮನುಷ್ಯ ಅದರಲ್ಲಿ ಇಡುವಷ್ಟೆ ಅದೇ ಆಕಾರದಂತೆ ಈ ಮಮ್ಮಿ ಸಿದ್ಧಪಡಿಸಲಾಗಿದೆ.

ಮಮ್ಮಿ ತೆಗೆಯುತ್ತಿದ್ದಂತೆ ಇಳಗಡೆ ಇದ್ದ ಶವದ ವಾಸನೆ ಬಂದಿದೆ.‌ ಆದರು‌ ಎಲ್ಲರೂ ಮೂಗು‌ ಮುಚ್ಚಿಕೊಂಡೆ ಈ ಶವ ಪೆಟ್ಟಿಗೆ ತೆಗೆದು ಶೋಧಿಸಿದ್ದಾರೆ. ಪುರಾತನ ಮಮ್ಮಿ ಆಕರ್ಷತೆ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ ಎನ್ನಲಾಗಿದೆ.

ತಲೆ‌‌ ಬುರಡೆ ಭಾಗದಲ್ಲಿ ಒಂದಿಷ್ಟು ಅಗಲತೆ ಹೊಂದಿದ್ದು, ಕೆಳಗಡೆ ಬಂದಂತೆ ಮನುಷ್ಯನ‌ ಆಕಾರದಂತೆ ಪೆಟ್ಟಿಗೆ ತಯಾರಿಸಿರುವ ಕುರಿತು ತಿಳಿದು ಬರುತ್ತದೆ. ಈ ಮಮ್ಮ ನೋಡಿ ಹಲವರಲ್ಲಿ‌ ಕುತುಹಲ‌ ಮೂಡಿದೆ ಎನ್ನಬಹುದು. ಅನಾದಿ ಕಾಲದಿಂದಲೂ ಮಮ್ಮಿ ಬಳಸುತ್ತಿರುವದು ಕಂಡು ಬಂದಿದೆ. ಪ್ರಸ್ತುತ ದೊರೆತಿರುವ ಮಮ್ಮಿಯಲ್ಲಿ ಯಾರ ಶವವಿದೆ ಎಂಬುದು ಮಾತ್ರ ಖಚಿತಗೊಂಡಿಲ್ಲ.

Related Articles

One Comment

Leave a Reply

Your email address will not be published. Required fields are marked *

Back to top button