ಮುಸ್ಲಿಂ ಬಾಂಧವರಿಗೆ ಸ್ವೀಟ್ ನೀಡಿ ಶುಭಾಶಯ ಕೋರಿದ ನಾಗರಿಕರು
ಮುಸ್ಲಿಂ ಬಾಂಧವರಿಗೆ ಸ್ವೀಟ್ ನೀಡಿ ಶುಭಾಶಯ ವ್ಯಕ್ತ ಪಡಿಸಿದ ನಾಗರಿಕರು
ಶಹಾಪುರಃ ನಗರದಲ್ಲಿ ಈದ್ ಮಿಲಾದ್ ಹಬ್ಬದಂಗವಾಗಿ ಮಸ್ಲಿಂಬಾಂಧವರು ಕೈಗೊಂಡ ಮೆರವಣಿಗೆ ಮೋಚಿಗಡ್ಡಕ್ಕೆ ಆಗಮಿಸುತ್ತಿದ್ದಂತೆ, ಹಿಂದೂ ಬಾಂಧವರು ಹಬ್ಬದ ಶುಭಾಯಶ ಕೋರಿ ಸಿಹಿ ತಿಂಡಿ ಹಂಚಿದರು. ಪರಸ್ಪರರು ಆಲಿಂಗಿಸಿಕೊಂಡು ಶುಭಾಶಯಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಸಣ್ಣ ನಿಂಗಪ್ಪ ನಾಯ್ಕೋಡಿ, ಶಹಾಪುರದಲ್ಲಿ ಪರಸ್ಪರರ ಹಬ್ಬಗಳಿಗೆ ಶುಭಾಯಶಯ ಕೋರುವದು ಸಿಹಿ ತಿಂಡಿ, ಶರಬತ್ ಹಂಚುವ ಮೂಲಕ ಸಹೋದರತ್ವ ಬಾಂಧವ್ಯ ಗಟ್ಟಿಗೊಳಿಸುವ ಸಂಪ್ರದಾಯ ಹಲವಾರು ವರ್ಷಗಳಿಂದ ನಡೆದು ಬಂದಿದೆ. ಇದು ಇಲ್ಲಿನ ಉತ್ತಮ ನಾಗರಿಕರ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಭಾವೈಕ್ಯತೆಗೆ ಶಹಾಪುರ ಹೆಸರುವಾಸಿಯಾಗಿದೆ. ಪರಸ್ಪರರು ಇಲ್ಲಿ ಸಹೋದರತೆ ಭಾವದಿಂದ ಒಂದಾಗಿ ಜೀವನ ನಡೆಸುತ್ತಿರುವದು ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ, ಸತೀಶ ಪಂಚಭಾವಿ, ಮಲ್ಲಿಕಾರ್ಜುನ ಗಂಗಾಧರಮಠ, ಸಣ್ಣನಿಂಗಪ್ಪ ನಾಯ್ಕೋಡಿ ಮುಸ್ಲಿಂಬಾಂಧವರಾದ ಸಯ್ಯದ್ ಖಾದ್ರಿ, ಶಕೀಲ್ ಮುಲ್ಲಾ, ಬಾಬಾ ಪಟೇಲ್ ಅವರನ್ನು ಅಪ್ಪಿಕೊಂಡು ಹಬ್ಬದ ಶುಭಾಶಯ ತಿಳಿಸಿದರು. ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಸಿಪಿಐ ಹನುಮರಡ್ಡೆಪ್ಪ ಸೇರಿದಂತೆ ಇತರರಿದ್ದರು.




