ಪ್ರಮುಖ ಸುದ್ದಿ

ಇನ್ಫೊಸಿಸ್ ನಾರಾಯಣಮೂರ್ತಿ ಅಳಿಯ, ಇಬ್ಬರು ಇಂಡಿಯನ್ಸ್ ಗೆ ಇಂಗ್ಲೆಂಡ್ ಪ್ರಧಾನಿ ಕ್ಯಾಬಿನೆಟ್ ನಲ್ಲಿ ಸ್ಥಾನ!

ಇಂಗ್ಲೆಂಡ್​ನ ನೂತನ ಪ್ರಧಾನಿಯಾಗಿ ಬೋರಿಸ್​ ಜಾನ್ಸನ್​ ನಿನ್ನೆಯಷ್ಟೇ ಅಧಿಕಾರ ಹಿಡಿದಿದ್ದಾರೆ. ಅವರ ಕ್ಯಾಬಿನೆಟ್​​ನಲ್ಲಿ ಇನ್ಫೋಸಿಸ್​ ಸಹಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಶಿ ಸುನಾಕ್​ ಸ್ಥಾನ ಪಡೆದಿದ್ದಾರೆ. ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಅವರ ಪತಿ ರಿಶಿ ಈ ಹಿಂದೆ ತೆರೆಸಾ ಮೇ ಸರ್ಕಾರದಲ್ಲೂ ಇದ್ದರು. ಅಂತೆಯೇ ಭಾರತೀಯ ಮೂಲದ ಅಲೋಕ್​ ಶರ್ಮ ಹಾಗೂ ಪ್ರೀತಿ ಪಟೇಲ್ ಸಹ ಬೋರಿಸಿ ಜಾನ್ಸನ್ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ​.

ರಿಶಿ ಅವರು ಯಾರ್ಕ್​ಶೈರ್​ನ ರಿಚ್​ಮಂಡ್​​ಗೆ ಕನ್ಸರ್ವೇಟಿವ್​ ಪಕ್ಷದ ಸಂಸದರಾಗಿದ್ದಾರೆ. ರಿಶಿ ಮೂಲತಃ ಇಂಗ್ಲಂಡ್​ನವರಾಗಿದ್ದಾರೆ. ಅಕ್ಷತಾಗೆ ಕ್ಯಾಲಿಫೋರ್ನಿಯಾದಲ್ಲಿ ಪರಿಚಿತರಾಗಿದ್ದು ಬಳಿಕ ಮದುವೆಯಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button