ಡಿಕೆಶಿ ವಿವಾದಾತ್ಮಕ ಹೇಳಿಕೆ : ರೈತರ ಆಕ್ರೋಶ
ಬೆಂಗಳೂರಃ ರೈತರ ಸಾಲ ಮನ್ನಾ ಮಾಡಿದರೂ ಆತ್ಮಹತ್ಯೆ ನಿಲ್ಲುತ್ತಿಲ್ಲ. ರೈತರು ತಮ್ಮ ವಯಕ್ತಿಕ ಕಾರಣಕ್ಕೋ ಅಥವಾ ಇನ್ನಾವದಕ್ಕೋ ಆತ್ಮಹತ್ಯೆ ಮಾಡಿಕೊಂಡು ಸಾಲದ ನೆಪ ಹೇಳುತ್ತಿದ್ದಾರೆಯೇ ಎಂಬ ಧಾಟಿಯಲ್ಲಿ ಸಚಿವ ಡಿ.ಕೆ.ಶಿವಕುಮಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ರಾಜ್ಯದಲ್ಲಿ ರೈತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ
ರೈತರ ಸಾಲ ಮನ್ನಾ ಮಾಡಲಾಗಿದೆ ಆದಾಗ್ಯೂ ರೈತರ ಆತ್ಮಹತ್ಯೆ ವರದಿಯಾಗುತ್ತಲೇ ಇವೆ. ನಾನು ಸುಮ್ನೆ ಹೇಳುತ್ತಿಲ್ಲ ವರದಿ ಕೈಯಲ್ಲಿಡಿದು ಮಾತನಾಡುತ್ತಿದ್ದೇನೆ ಎಂದ ಅವರು,
ಈ ಬಗ್ಗೆ ಸರ್ಕಾರ ತನಿಖೆಕೈಗೊಳ್ಳಬೇಕಿದೆ ಎಂದು ವಿವಾದಾತ್ಮಕವಾಗಿ ಮಾತನಾಡಿದ್ದಾರೆ ಎಂದು ರೈತ ಸಂಘಟನೆಯ ಮಲ್ಲಯ್ಯ ಪೋಲಂಪಲ್ಲಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀಡಿದ್ದಾರೆ ಎನ್ನಲಾಗಿದೆ. ಈ ವಿವಾದಾತ್ಮಕ ಹೇಳಿಕೆಯನ್ನು ರೈತಪರ ಮತ್ತು ಕನ್ನಡಪರ ಸಂಘಟನೆಗಳು ಖಂಡಿಸಿವೆ.
ಡಿಕೆಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಕೂಡಲೇ ಕ್ಷಮೆಯಾಚಿಸಿಬೇಕು ಇಲ್ಲವಾದಲ್ಲಿ ಹೇಳಿಕೆ ಸಮರ್ಥಿಸಿಕೊಂಡಲ್ಲಿ ದೊಡ್ಡ ಮಟ್ಟದ ವಿರೋಧ ಮೇಲೆಳೆದುಕೊಂಡಂತೆ ಎಂದು ಬಿಂಬಿಸಲಾಗುತ್ತಿದೆ.
ಡಿಕೆಶಿ ಹೇಳಿಕೆ ಮುಂದೆ ಎಲ್ಲಿಗೆ ಬಂದು ನಿಲ್ಲಲಿದೆ ಎಂಬುದು ಗೊತ್ತಿಲ್ಲ.