ಪ್ರಮುಖ ಸುದ್ದಿ
ಮಾಸ್ಕ್ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಲ್ಲಿ 104 ಗೆ ಕರೆ ಮಾಡಿ
ಮಾಸ್ಕ್ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಲ್ಲಿ 104 ಗೆ ಕರೆ ಮಾಡಿ
ಬೆಂಗಳೂರಃ ಕೊರೋನಾ ವೈರಸ್ ಆತಂಕವನ್ನೆ ಲಾಭವಾಗಿಸಿಕೊಳ್ಳಲು ಕೆಲವು ಫಾರ್ಮಸಿಸ್ಟ್ಗಳು ಮತ್ತು ಔಷಧ ವಿತರಕರ ಕಂಪನಿಗಳು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾಸ್ಕ್ ಮಾರಾಟ ಮಾಡಲಾಗುತ್ತಿದ್ದು, ಅಂಥವರ ವಿರುದ್ಧ ದೂರು ಸಲ್ಲಿಸಿದ್ದಲ್ಲಿ ಕಠಿಣ ಕ್ರಮಕೈಗೊಳ್ಳುವದಾಗಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ ತಿಳಿಸಿದ್ದಾರೆ.
ನಗರ ಪ್ರದೇಶದ ಮೆಡಿಕಲ್ ಗಳಲ್ಲಿ ಒಂದು ಮಾಸ್ಕ್ ಗೆ 20-30 ರೂ.ನೀಡುತ್ತಿರುವದು ಕಂಡು ಬಂದಿದೆ. ಮಾಸ್ಕ್ ನ ಎಂಆರ್ ಪಿ ಗಿಂತ ಜಾಸ್ತಿ ದರ ತೆಗೆದುಕೊಂಡಲ್ಲಿ ಕೂಡಲೇ ಆರೋಗ್ಯವಾಣಿ 104 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.