ಪ್ರಮುಖ ಸುದ್ದಿ

ಶಹಾಪುರಃ ನಕಲಿ ಮಧ್ಯ ಸಂಗ್ರಹ ಘಟಕದ ಮೇಲೆ ದಾಳಿ- ಅಧಿಕಾರಿಗಳ ಮೇಲೆ ಹಲ್ಲೆ

45 ನಕಲಿ ಮಧ್ಯ ಬಾಕ್ಸ್, ಕಾರು ವಶಕ್ಕೆ ಆರೋಪಿ ಬಂಧನ ವೇಳೆ ಕಲ್ಲು ತೂರಾಟ, ಪ್ರಕರಣ ದಾಖಲು

ನಕಲಿ ಮಧ್ಯ ಸಂಗ್ರಹ ಘಟಕದ ಮೇಲೆ ದಾಳಿ- ಅಧಿಕಾರಿಗಳ ಮೇಲೆ ಹಲ್ಲೆ

45 ನಕಲಿ ಮಧ್ಯ ಬಾಕ್ಸ್, ಕಾರು ವಶಕ್ಕೆ ಆರೋಪಿ ಬಂಧನ ವೇಳೆ ಕಲ್ಲು ತೂರಾಟ, ಅಧಿಕಾರಿಗಳ ಮೇಲೆ ಹಲ್ಲೆ, 40 ಜನರ ಮೇಲೆ ಪ್ರಕರಣ ದಾಖಲು, ಆರೋಪಿ ಪರಾರಿ

yadgiri, ಶಹಾಪುರಃ ತಾಲೂಕಿನಲ್ಲಿ ನಕಲಿ ಮಧ್ಯ ಹಾವಳಿ ಜಾಸ್ತಿಯಾಗಿದ್ದು, ಅಬಕಾರಿ ಅಧಿಕಾರಿಗಳು ಅದರ ಮೂಲ ಪತ್ತೆಗೆ ಸಾಕಷ್ಟು ಶ್ರಮವಹಿಸುತ್ತಿದ್ದು, ಗುರುವಾರ ಖಚಿತ ಮಾಹಿತಿ ಮೇರೆಗೆ ತಾಲೂಕಿನ ಚಂದಾಪುರ ಗ್ರಾಮದ ಹೊರ ವಲಯದ ತೋಟವೊಂದರಲ್ಲಿ ನಕಲಿ ಮಧ್ಯ ಸಂಗ್ರಹಿಸಿರುವದನ್ನು ಖಚಿತ ಮಾಹಿತಿ ಮೇರೆಗೆ ಪತ್ತೆ ಮಾಡಿದ ಅಧಿಕಾರಿಗಳ ತಂಡ ಗುರುವಾರ ಸಂಜೆ ದಾಳಿ ನಡೆಸಿ 45 ನಕಲಿ ಮಧ್ಯದ ಬಾಕ್ಸ್ (ಅಂದಾಜು 12 ಲಕ್ಷಕ್ಕೂ ಅಧಿಕ ಮೌಲ್ಯ) ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಆರೋಪಿ ಹಣಮಂತ್ರಾಯ ಸದಾಶಿವ ಸಾಹು ಅವರನ್ನು ಅಬಕಾರಿ ಅಧಿಕಾರಿಗಳ ತಂಡ ಬಂಧಿಸಿ ಕರೆದೊಯ್ಯುವಾಗ ಗ್ರಾಮಸ್ಥರು ಹಾಗೂ ಆತನ ಹಿಂಬಾಲಕರು  ಅಧಿಕಾರಿಗಳ ಮೇಲೆ ಕಲ್ಲೂ ತೂರಾಟ ನಡೆಸಿದ್ದಲ್ಲದೆ, ಕಟ್ಟಿಗೆ ಸಿಕ್ಕ ಸಿಕ್ಕದ್ದನ್ನು ತೆಗೆದುಕೊಂಡು ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಜೀವ ಬೆದರಿಕೆವೊಡ್ಡಿ ಆರೋಪಿ ಹಣಮಂತ್ರಾಯನನ್ನು ಕರೆದೊಯ್ಯದಿದ್ದಾರೆ.ತಲೆಗೆ ಮೈಗೆ ಗಾಯಗೊಂಡ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ. ಕರ್ತವ್ಯಕ್ಕೆ ಅಡ್ಡಿ ಪಡಿಸಿ ಹಲ್ಲೆ ನಡೆಸಿದವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ವಿವರಃ ಚಾಮನಾಳ ಮೂಲಕ ಚಂದಾಪುರ ಗ್ರಾಮದ ಕಡೆ ಕಾರೊಂದರಲ್ಲಿ ನಕಲಿ ಮಧ್ಯ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಬಕಾರಿ ಉಪ ನೀರಿಕ್ಷಕ ವಿಜಯಕುಮಾರ ಹಿರೇಮಠ ತಂಡಚಂದಾಪುರ ಮಾರ್ಗದಲ್ಲಿ ತಪಾಸಣೆಗಾಗಿ ನಿಂತ ವೇಳೆ ಕೆಎ 33 ಎ 7677 ಸ್ವಿಫ್ಟ್ ಡಿಸೈರ್ ಕಾರು ಪರಿಶೀಲಿಸಲಾಗಿ ಹಿಂದಿನ ಡಿಕ್ಕಿಯಲ್ಲಿ ನಕಲಿ ಮಧ್ಯ ಪತ್ತೆಯಾಗಿದೆ.
ಚಾಲಕನನ್ನು ವಿಚಾರಿಸಲಾಗಿ, ಆತ ಹಣಮಂತ್ರಾಯ ತಂದೆ ಸದಾಶಿವ ಸಾಹು ಎಂದು ತಿಳಿದು ಬಂದಿದೆ. ಆತನನ್ನು ವಿಚಾರಿಸಿದ ಅಧಿಕಾರಿಗಳು ಈ ಮಧ್ಯ ಎಲ್ಲಿಗೆ ಸಾಗಿಸುತ್ತಿರುವೆ ಎಂದಾಗ ಸಮೀಪದ ತೋಟದ ಮನೆಯಲ್ಲಿ ಸಂಗ್ರಹಿಸಲು ಎಂದು ಬಾಯಿ ಬಿಟ್ಟಿದ್ದಾನೆ. ಆತನ ಜೊತೆ ತೋಟದ ಮನೆಗೆ ಹೋಗಿ ಪರಿಶೀಲಿಸಲಾಗಿ 45 ಬಾಕ್ಸ್ ನಕಲಿ ಮಧ್ಯ ಪತ್ತೆಯಾಗಿದ್ದು, ಆತನಿಗೆ ಸಹಕರಿಸುವ ತೋಟದಲ್ಲಿದ್ದ ಇನ್ನೂ ನಾಲ್ವರನ್ನು ಬಂಧಿಸುವಷ್ಟರಲ್ಲಿ ಸುಮಾರು 40-50 ಜನ ಆಗಮಿಸಿ ಕಲ್ಲು ತೂರಾಟ ನಡೆಸಿ ಅಧಿಕಾರಿಗಳನ್ನು ಬಡಿದು ಆರೋಪಿ ಸಮೇತ ಪರಾರಿಯಾದ ಘಟನೆ ನಡೆದಿದೆ.

ಕಾರು ಮತ್ತು ನಕಲಿ ಮಧ್ಯ ವಶಕ್ಕೆ ಪಡೆಯಲಾಗಿ ಮುಖ್ಯ ಆರೋಪಿ ಸೇರಿ ಐದು ಜನರ ವಿರುದ್ಧ ನಕಲಿ ಮಧ್ಯ ಮಾರಾಟ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಅಬಕಾರಿ ಅಧಿಕಾರಿಗಳ ತಂಡ ಜಾಲ ಬೀಸಿದೆ. ದಾಳಿ ವೇಳೆ ಶಹಾಪುರ ಉಪ ವಿಭಾಗ ಉಪ ಅಧೀಕ್ಷಕ ಶ್ರೀರಾಮ ರಾಠೋಡ ನೇತೃವದಲ್ಲಿ ಶಹಾಪುರ ಉಪ ನಿರೀಕ್ಷಕ ಧನರಾಜ ಹಳ್ಳಿಖೇಡ, ಉಪ ನಿರೀಕ್ಷಕ ಸಾದಿಕ್ ಹುಸೇನ್, ಅಬಕಾರಿ ಪೇದೆಗಳು ಸೇರಿದಂತೆ ಆಯುಕ್ತರು ರಚಿಸಿದ ವಿಶೇಶ ತಂಡ ಭಾಗವಹಿಸಿತ್ತು.

40 ಜನ ಹಲ್ಲೆಕೋರರ ಮೇಲೆ ಪ್ರಕರಣ ದಾಖಲುಃ

ದಾಳಿ ವೇಳೆ ಅಬಕಾರಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಸುಮಾರು 40 ಜನರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಗೋಗಿ ಠಾಣೆಯಲ್ಲಿ ಅಬಕಾರಿ ಉಪ ನಿರೀಕ್ಷಕ ವಿಜಯಕುಮಾರ ಹಿರೇಮಠ ಪ್ರಕರಣ ದಾಖಲಿಸಿದ್ದಾರೆ.
ಐಪಿಸಿ ಕಲಂ 143, 147, 148, 323, 332, 353, 307, 504, 506 ರ ಅಡಿ ಗೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಕೋರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಎಫ್‍ಐಆರ್‍ನಲ್ಲಿ 20 ಜನರ ಹೆಸರು ದಾಖಲಿಸಿದ್ದು, ಇನ್ನುಳಿದ 20 ಜನರ ಹೆಸರು ವಿಳಾಸ ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ಮಧ್ಯದ ಜಾಲ ಆಳವಾಗಿ ವ್ಯಾಪಿಸಿದ್ದು, ಅದರ ನಿರ್ಮೂಲನೆಗೆ ಪಣ ತೊಡಲಾಗಿದೆ. ಅದನ್ನು ಬೇರು ಸಮೇತ ಕಿತ್ತೆಸೆಯುವವರಿಗೆ ಬಿಡುವದಿಲ್ಲ. ನಕಲಿ ಮಧ್ಯ ಸೇವಿಸಿ ಆರೋಗ್ಯ ಹಾಳು ಮಾಡಿಕೊಂಡು ಸಾಯುವ ಜನರು ತಿಳಿದುಕೊಳ್ಳಬೇಕು. ಚಂದಾಪುರದಲ್ಲಿ ನಕಲಿ ಮಧ್ಯ ಮಾರಾಟಗಾರ ಆರೋಪಿಯನ್ನು ನಮ್ಮ ಅಧಿಕಾರಿಗಳ ತಂಡ ಬಂಧಿಸಿ ತರುವಾಗ ಗ್ರಾಮಸ್ಥರೇ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಹೇಯ ಕೃತ್ಯ ಅವರ ವಿರುದ್ಧವು ಪ್ರಕರಣ ದಾಖಲು ಮಾಡಲಾಗಿದೆ. ಅಂದಾಜು 12 ಲಕ್ಷಕ್ಕೂ ಅಧಿಕ ಮೌಲ್ಯದ 45 ಬಾಕ್ಸ್ ನಕಲಿ ಮಧ್ಯ ಮತ್ತು ಆರೋಪಿಯ ಸ್ವಿಫ್ಟ್ ಡಿಸೈರ್ ಕಾರು ವಶಕ್ಕೆ ಪಡೆಯಲಾಗಿದೆ.

-ಮೋತಿಲಾಲ್. ಅಬಕಾರಿ ಆಯುಕ್ತರು. ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button