ಪ್ರಮುಖ ಸುದ್ದಿ
ಶಹಾಪುರಃ ರಸ್ತೆ ಅಪಘಾತ ಓರ್ವ ಸಾವು
ಶಹಾಪುರಃ ರಸ್ತೆ ಅಪಘಾತ ಓರ್ವ ಸಾವು
ಶಹಾಪುರಃ ತಾಲೂಕಿನ ಹತ್ತಿಗುಡೂರು-ಸಾವೂರ ಮಾರ್ಗ ಮಧ್ಯ ಬೈಕ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ರಾತ್ರಿ 9.30 ಕ್ಕೆ ನಡೆದಿದೆ.
ಮೃತ ದುರ್ದೈವಿ ಸಾಬಣ್ಣ ತಂದೆ ಚಂದಪ್ಪ (26) ಎಂದು ಗುರುತಿಸಲಾಗಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.