ಫೇಸ್‌ಬುಕ್ ಸಹವಾಸ ಮಾಡಿದ ಪೊಲೀಸ್ ಪೇದೆ ಕೆಲಸ ಕಳೆದುಕೊಂಡು ವನವಾಸ!
ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಸ್ಟೇಟಸ್ ಶೇರ್ ಮಾಡಿದ ತಪ್ಪಿಗೆ ಅಮಾನತು
ಕೊಡಗು: ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಠಾಣೆಯ ಪೇದೆ ಶಮಿಲ್ ಸದಾ ಫೇಸ್‌ಬುಕ್ ನಲ್ಲಿ ಎಕ್ಟಿವ್ ಆಗಿರುತ್ತಿದ್ದರಂತೆ. ಫೇಸ್‌ಬುಕ್ ಫ್ರೆಂಡ್ಸ್ ಸ್ಟೇಟಸ್ಸನ್ನು ಹೆಚ್ಚಾಗಿ ಶೇರ್ ಮಾಡುತ್ತಿದ್ದರಂತೆ. ಆದರೆ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ವಿವಾದಾತ್ಮಕ ಸ್ಟೇಟಸ್ ಗಳನ್ನು ಶೇರ್ ಮಾಡಿದ್ದಾರಂತೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಗ್ಗೆ, ಆರ್ ಎಸ್ ಎಸ್ ಬ್ಯಾನ್ ಮಾಡುವ ಬಗ್ಗೆ ಬರೆದಿದ್ದ ವಿವಾದಾತ್ಮಕ ಸ್ಟೇಟಸ್ ಗಳನ್ನೂ ಶೇರ್ ಮಾಡಿದ್ದರಂತೆ. ಈ ಬಗ್ಗೆ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿದ ಎಸ್ಪಿ ರಾಜೇಂದ್ರ ಪ್ರಸಾದ್ ಅವರು ಪೊಲೀಸ್ ಪೇದೆ ಶಮಿಲ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನುಮುಂದೆ ಸಾಮಾಜಿಕ ಜಾಲತಾಣಗಳಲ್ಲಿ ಇತರರ ಸ್ಟೇಟಸ್ ಗಳನ್ನು ಶೇರ್ ಮಾಡುವ ಮುನ್ನ ಎಚ್ಚರವಹಿಸಬೇಕಿದೆ. ನಮ್ಮ ಅಭಿಪ್ರಾಯವೇ ಆಗಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿರಬಹುದು. ಆದರೆ, ಬೇರೆಯವರ ಅಭಿಪ್ರಾಯವನ್ನು ಶೇರ್ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕಿದೆ. ಕೊನೆಯ ಪಕ್ಷ ನಾವು ಶೇರ್ ಮಾಡುತ್ತಿರುವದರ ಬಗ್ಗೆ ತಿಳಿದುಕೊಂಡ ಬಳಿಕ ಶೇರ್ ಮಾಡಬೇಕಿದೆ. ಇಲ್ಲವಾದಲ್ಲಿ ವಿನಾಕಾರಣ ಇಕ್ಕಟ್ಟಿಗೆ ಸಿಲುಕಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Realy wr proud to be have like this digital media i am getting every news through this media instead of reading and watching news i hats of to my friend mallu mudnur editor of this.