ಪ್ರಮುಖ ಸುದ್ದಿ
ನಕಲಿನೋಟು ತಯಾರಿಕಾ ಜಾಲ ಪತ್ತೆ, ಮೂವರ ಬಂಧನ!
ವಿಜಯಪುರ: ನಗರದ ದರ್ಗಾ ಜೈಲು ಸಮೀಪದ ಮನೆಯ ಮೇಲೆ ಡಿಸಿಐಬಿ ಪೊಲೀಸರು ದಾಳಿ ನಡೆಸಿದ್ದು ನಕಲಿನೋಟು ತಯಾರಿಕಾ ಜಾಲ ಬೇಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 200, 500 ಮತ್ತು 2000 ಮುಖಬೆಲೆಯ 67.200 ರೂಪಾಯಿ ನಕಲಿನೋಟು ವಶಕ್ಕೆ ಪಡೆದಿದ್ದಾರೆ.
ನಕಲಿ ನೋಟು ಮುದ್ರಿಸುತ್ತಿದ್ದ 38 ಪೇಪರ್ ಗಳು, 2 ಪ್ರಿಂಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದಾರೆ. ನಕಲಿ ನೋಟಿನ ಜಾಲ ಪತ್ತೆಯಾಗಿದ್ದು ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಯಾರ ಬಳಿ ಅದ್ಯಾವ ನೋಟು ಇರುತ್ತದೋ ಎಂಬ ಅನುಮಾನಗಳು ಶುರುವಾಗಿವೆ. ಹೀಗಾಗಿ, ಪೊಲೀಸರು ನಕಲಿ ನೋಟಿನ ಜಾಲಕ್ಕೆ ಸಂಪೂರ್ಣ ಕಡಿವಾಣ ಹಾಕುವ ಮೂಲಕ ಜನರ ಅನುಮಾನ, ಆತಂಕ ದೂರಾಗಿಸಬೇಕಿದೆ.