ಕಲಬುರ್ಗಿಃ ಕಾಗಿಣಾ ನದಿಗೆ ಬಿದ್ದ ಅಳಿಯ, ಮಾವ ಸಾವು
ನದಿಗೆ ಬಿದ್ದ ಅಳಿಯನ ರಕ್ಷಣೆಗೆ ಧಾವಿಸಿದ ಮಾವನೂ ಸಾವು
ಕಲಬುರ್ಗಿಃ ಕಾಲು ಜಾರಿ ನದಿಗೆ ಬಿದ್ದ ಬಾಲಕ ಸೇರಿದಂತೆ ಆತನ ರಕ್ಷಣೆಗೆ ಧಾವಿಸಿದ ವ್ಯಕ್ತಿ ಇಬ್ಬರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮೀನಹಾಬಾಳ ಗ್ರಾಮದಲ್ಲಿ ಘಟನೆ ಜರುಗಿದೆ.
ಭರತ್ (12) ಎಂಬ ಬಾಲಕ ಕಾಲು ಜಾರಿ ನದಿಗೆ ಬಿದ್ದಾಗ ಜೊತೆಯಲ್ಲಿಯೇ ಇದ್ದ ಬಾಲಕನ ಸೋದರಮಾವ ಮಲ್ಲಿಕಾರ್ಜುನ (35) ಅಳಿಯನ ರಕ್ಷಣೆಗೆ ನದಿಗೆ ಇಳಿದಿದ್ದು, ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ.
ಈ ಕುರಿತು ಮಳಖೇಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಈಜೂ ತಜ್ಞರ ತಂಡ ಶವಗಳ ಹುಡುಕಾಟ ನಡೆಸಿದ್ದಾರೆ. ಈಗಾಗಲೆ ಭರತ ಶವ ಹೊರತೆಗೆದಿದ್ದು, ಮಲ್ಲಿಕಾರ್ಜುನನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಭರತ್ ಮತ್ತು ಮಾವ ಮಲ್ಲಿಕಾರ್ಜುನ ಇಬ್ಬರಿಗೂ ಈಜು ಬರುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈಜು ಬರದಿದ್ದರೂ ಮಲ್ಲಿಕಾರ್ಜುನ ಅಳಿಯನ ರಕ್ಷಣೆಗೆ ನದಿಗೆ ಇಳಿದಿದ್ದಾನೆ, ಬಾಲಕ ನೀರಿಗೆ ಬಿದ್ದ ತಕ್ಷಣ ಮಾವ ಎಂದು ಕೂಗುತ್ತಿದ್ದಂತೆ, ಆತನ ರಕ್ಷಣಿಗೆ ಪರತಪಿಸಿ ತನಗೆ ಈಜೂ ಬರುವದಿಲ್ಲ ಎಂಬ ಅರಿವಿರದೆ ಆತ ಅಳಿಯನ ರಕ್ಷಣೆಗಾಗಿ ನೀರಿಗೆ ಇಳಿದಿದ್ದಾನೆ ಎನ್ನಲಾಗಿದೆ.
ಆದರೆ ವಿಧಿಆಟ ಇಬ್ಬರನ್ನು ಬಲಿ ತೆಗೆದುಕೊಂಡಂತಾಗಿದೆ. ಮೃತರ ಮನೆ ಮುಂದೆ ಕುಟುಂಬಸ್ಥರು, ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.
ವಿವಿ ಪ್ರಾರ್ಥನೆಃ ದೀಪಾವಳಿ ಹಬ್ಬ ಅವರ ಪಾಲಿಗೆ ಕತ್ತಲಾವರಿಸಿದಂತಾಗಿದೆ. ಹಬ್ಬದ ದಿನ ನಡೆದ ಘಟನೆ ಕುಟುಂಬಸ್ಥರಿಗೆ ಅತೀವ ನೋವು ಉಂಟು ಮಾಡಿದೆ. ಮೃತರ ಮನೆಯಲ್ಲಿ ಇಂದು ಬೆಳಗಬೇಕಾದ ದೀಪ, ಶಾಂತವಾಗಿ ಕತ್ತಲಾವರಿಸಿದೆ. ಮೃತರ ಕುಟುಂಬಸ್ಥರಿಗೆ ದುಖಃ ತಡೆಯುವ ಶಕ್ತಿ ಆ ದೇವರು ಕಲ್ಪಿಸಲಿ ಎಂದು ವಿನಯವಾಣಿ ಪ್ರಾರ್ಥಿಸುತ್ತದೆ.