ಕೃಷಿ ಜಾಗೃತ ದಳದ ಮಿಂಚಿನ ಸಂಚಾರ, 16 ಮಳಿಗೆಗಳಿಗೆ ಶೋಕಾಸ್ ನೋಟಿಸ್
16 ಮಳಿಗೆಗಳಿಗೆ ಶೋಕಾಸ್ ನೋಟಿಸ್ ಜಾರಿ
ಯಾದಗಿರಿಃ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮಾರ್ಗದರ್ಶನದ ಮೇರೆಗೆ ಜಾಗೃತ ದಳ ಜಿಲ್ಲೆಯ ಶಹಾಪುರ ನಗರದಲ್ಲಿ ಮಿಂಚಿನ ಸಂಚಾರ ನಡೆಸಿ, ಕೃಷಿ ಕ್ರಿಮಿನಾಷಕ ಔಷಧಿ ಅಂಗಡಿಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿತು.
ಈ ಸಂದರ್ಭದಲ್ಲಿ ಸಂಶಯಾಸ್ಪದವಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ ತಂಡ ಕೃಷಿಗೆ ಬಳಕೆ ಮಾಡುವ ಕ್ರಿಮಿನಾಶಕ ಔಷಧಿಗಳನ್ನು ತಪಾಸಣೆ ನಡೆಸಿದರು. ಅಲ್ಲದೆ ಬೀಜ ಮತ್ತು ರಸಗೊಬ್ಬರಗಳ ಕೀಟನಾಷಕ ಅಧಿನಿಯಮಗಳ ಪ್ರಕಾರ ದಾಖಲಾತಿ ನಿರ್ವಹಣೆ ಮಾಡದ 16 ಮಳಿಗೆಗಳನ್ನು ತಾತ್ಕಾಲಿಕವಾಗಿ ಮಾರಾಟ ಸ್ಥಗಿತಗೊಳಿಸಲು ಸೂಚಿಸಿದರ.
ತಾತ್ಕಾಲಿಕವಾಗಿ ಮಳಿಗೆ ಬಂದ್ ಮಾಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಅಲ್ಲದೆ ಪರವಾನಿಗೆ ರದ್ದುಗೊಳಿಸುವ ಕುರಿತು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.
ದಾಳಿ ಸಂದರ್ಭ ವಿವಿಧ ತಂಡಗಳಲ್ಲಿ ಸಹಾಯಕ ಕೃಷಿ ಅಧಿಕಾರಿ ರೂಪಾ, ಶಹಾಪುರ ಕೃಷಿ ಸಹಾಯಕ ನಿರ್ದೇಶಕ ಗೌತಮ್ ಸೇರಿದಂತೆ ಕೃಷಿ ಉಪ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಮತ್ತು ಜಾಗೃತ ಕೋಶ ಅಧಿಕಾರಿ ಹಾಗೂ ತಾಂತ್ರಿಕ ಕೃಷಿ ಅಧಿಕಾರಿಗಳನ್ನು ಹೊಂದಿದ್ದ ಒಟ್ಟು ನಾಲ್ಕು ತಂಡಗಳಲ್ಲಿ ಕಾರ್ಯಚಾರಣೆ ನಡೆಸಿದರು.