ತಹಸೀಲ್ದಾರ ಮುಂದೆ ರೈತ ಆತ್ಮಹತ್ಯೆಗೆ ಯತ್ನ
ಯಾದಗಿರಿಃ ಜಮೀನಿನ ದಾಖಲೆ ನೀಡದಕ್ಕೆ ಮನನೊಂದ ರೈತನೋರ್ವ ತಹಸೀಲ್ದಾರರ ಎದುರೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿದ ಘಟನೆ ಜಿಲ್ಲೆಯ ಹುಣಸಿಗಿ ತಾಲೂಕಿನಲ್ಲಿ ನಡೆದಿದೆ.
ತಹಸೀಲ್ ಕಚೇರಿ ಎದುರೇ ತಹಶೀಲ್ದಾರ ಸುರೇಶ ಅವರ ಮುಂದೆ ರೈತ ಜುಮ್ಮಣ್ಣ ವಿಷ ಸೇವನೆ ಮಾಡಲು ಮುಂದಾಗಿದ್ದು, ತಕ್ಷಣ ಅರಿತ ತಹಸೀಲ್ದಾರ ಸುರೇಶ ವಿಷ ಸೇವನೆಗೆ ತಡೆವೊಡ್ಡಿದರು ಎನ್ನಲಾಗಿದೆ.
2 ವರ್ಷದಿಂದ ಜಮೀನು ಸರ್ವೆಗೆ ಹಾಗೂ ಅಗತ್ಯ ದಾಖಲೆಗಳ ಪಡೆಯಲು ತಹಸೀಲ್ದಾರ ಕಚೇರಿಗೆ ಅಲೆದಾಡಿ ಬೇಸತ್ತಿದ್ದ ಜುಮ್ಮಣ್ಣ ಕ್ರಿಮಿನಾಶಕ ಔಷಧಿ ತಂದು ತಹಸೀಲ್ದಾರ ಎದುರು ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದ ಎನ್ನಲಾಗಿದೆ.
ಯಡ್ಡಳ್ಳಿ ಗ್ರಾಮದ ರೈತ ಜುಮ್ಮಣ್ಣ ಎಂಬಾತನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ ರೈತನಾಗಿದ್ದು, ತನ್ನ ಜಮೀನಿನ ದಾಖಲೆ ನೀಡಲು ತಹಸೀಲ್ ಸಿಬ್ಬಂದಿ ಕ್ಯಾರೆ ಅನ್ನದೆ ವರ್ಷಾನುಗಟ್ಟಲೇ ಅಲೆದಾಡಿಸುತ್ತಿರುವ ಕಾರಣ ತೀವ್ರ ನೊಂದಿದ್ದ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಕೊಡಲೇ ಅನಾಹುತ ತಪ್ಪಿಸಿದ ತಹಶಿಲ್ದಾರ ಸುರೇಶ, ರೈತ ಜುಮ್ಮಣ್ಣನನ್ನು ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆ ಗೆ ದಾಖಲಿಸಿದ್ದಾರೆ. ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.