ಪ್ರಮುಖ ಸುದ್ದಿ
ಅಪ್ಪನ ಸಮಾಧಿ ಬಳಿ ಮಗ ಆತ್ಮಹತ್ಯೆಗೆ ಶರಣು
ಕೊಳವೆಬಾವಿ ವಿಫಲ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ರೈತ
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಮದ ರೈತ ಪ್ರಕಾಶ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎರಡು ಎಕರೆ ಹೊಲ ಹೊಂದಿದ್ದ ಪ್ರಕಾಶ ಕೃಷಿಗಾಗಿ ಎರಡು ಕೊಳವೆಬಾವಿ ಕೊರೆಸಿದ್ದರು. ಆದರೆ, ಎರಡೂ ಕೊಳವೆ ಬಾವಿಗಳು ವಿಫಲವಾಗಿದ್ದವು. ಸಾಲಸೋಲ ಮಾಡಿ ಕೃಷಿಯಲ್ಲಿ ತೊಡಗಿದ್ದ ರೈತ ಚಿಂತೆಗೀಡಾಗಿದ್ದ. ಪರಿಣಾಮ ತಂದೆಯ ಸಮಾಧಿ ಬಳಿಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.