ಪ್ರಮುಖ ಸುದ್ದಿ
ಹಾಲು ನೆಲಕ್ಕೆ ಸುರಿಯಲು ಕಾರಣ ಅಧಿಕಾರಿಯ ಅಂದಾದರ್ಬಾರ!
ಚಿತ್ರದುರ್ಗ : ಚಳ್ಳಕೆರೆ ಪಟ್ಟಣದ ಹೊರವಲಯದಲ್ಲಿರುವ ನರಹರಿ ಬಡಾವಣೆಯ ನರಹರಿ ಹಾಲು ಉತ್ಪಾದಕರ ಸಹಾಕರ ಸಂಘದ ಎದುರು ಇಂದು ಹಾಲು ಉತ್ಪಾದಕರು ಕ್ಯಾನಿನಲ್ಲಿ ತಂದಿದ್ದ ಹಾಲನ್ನು ನೆಲಕ್ಕೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಹಾಲು ಉತ್ಪಾದಕರ ಸಂಘದ ಅಧಿಕಾರಿಗಳು ನಿತ್ಯವೂ ಇಲ್ಲದ ನೆಪ ಹೇಳಿ ಹಾಲು ತಿರಸ್ಕರಿಸುತ್ತಿದ್ದು ಸಂಕಷ್ಟದಲ್ಲಿರುವ ರೈತರಿಗೆ ಭಾರೀ ನಷ್ಟವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಈ ಬಗ್ಗೆ ಅನೇಕ ಸಲ ಪ್ರತಿಭಟನೆ ಮಾಡಿ ಹಿರಿಯ ಅಧಿಕಾರಿಗಳಿಗೂ ಈ ಬಗ್ಗೆ ತಿಳಿಸಲಾಗಿದೆ. ಆದರೂ ಕಾರ್ಯದರ್ಶಿ ಜಯಣ್ಣ ಹಾಲು ಪರಿಶೀಲನೆಗೆ ಯಾವುದೇ ಮಾನದಂಡ ಅನುಸರಿಸದೆ ವಿನಾಕಾರಣ ತಿರಸ್ಕರಿಸಿ ಅಂದಾದರ್ಬಾರ ನಡೆಸುತ್ತಿದ್ದು ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇನ್ನಾದರೂ ಸಂಬಂಧಿತ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ನ್ಯಾಯ ದೊರಕಿಸಿಕೊಡಬೇಕೆಂದು ಹಾಲು ಉತ್ಪಾದಕರು ಆಗ್ರಹಿಸಿದರು.