ಪ್ರಮುಖ ಸುದ್ದಿ

ಕೃಷ್ಣನ ಬಾಲಲೀಲೆ ನೆನಪಿಸುವ ಪಂಚಮಿ ಗಿಂಡಿ ಕೋಲಾಟ

ಶ್ರೀ ವೇಣುಗೋಪಾಲ ದೇವಸ್ಥಾನದಲ್ಲಿ ಚಿಣ್ಣರ ಕಲರವ

yadgiri, ಶಹಾಪುರ: ಭಗವಾನ್ ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಪಂಚಮಿ ಗಿಂಡಿ ಕೋಲಾಟವನ್ನು ಐದು ದಿನಗಳವರೆಗೆ ಹಳೆಪೇಟೆ ಓಣಿಯ ಬಾಲಕಿಯರು ಬಣ್ಣ ಬಣ್ಣದ ವೇಷಭೂಷಣ ಧರಿಸಿ, ನೃತ್ಯ ಮಾಡುವ ಮೂಲಕ ಶ್ರದ್ಧಾ ಭಕ್ತಿ ಪೂರ್ವಕವಾಗಿ ದೇವರನಾಮವನ್ನು ಪ್ರಸ್ತುತ ಪಡಿಸಿದರು.

ದೀಪಾವಳಿ ಪಾಡ್ಯದಿಂದ ಪಂಚಮಿವರೆಗೆ ಪ್ರತಿಯೊಬ್ಬರು ಮನೆಯಿಂದ ನೀರು ತುಂಬಿದ ಹಿತ್ತಾಳೆ, ತಾಮ್ರದ ಸಣ್ಣ ಸಣ್ಣ ಗಿಂಡಿಗಳಿಗೆ ಅರಳಿ ಎಲೆ, ಹೂವು, ಹೂವಿನ ಹಾರಗಳಿಂದ ಅಲಂಕಾರ ಮಾಡಿ ದೇವಸ್ಥಾನದ ಆವರಣದಲ್ಲಿ ಇಟ್ಟು, ಅದರ ಸುತ್ತಲೂ ಕುಣಿಯುತ್ತಾ, ಹಾಡುತ್ತಾ ಶ್ರೀಕೃಷ್ಣರಾಧೆ, ಗೋಪಿಕಾ ಸ್ತ್ರೀಯರ ಬಾಲಲೀಲೆಗಳನ್ನು ಪ್ರದರ್ಶಿಸಿದರು.

ಓಣಿಯ ಮಾತೆಯರು ಚಿಕ್ಕವರಿಗೆ ಹಿನ್ನಲೆ ಹಾಡು ಹೇಳುತ್ತಾ, ಪ್ರೋತ್ಸಾಹ ನೀಡಿದರು. ದಿನನಿತ್ಯ ಮನೆಯಿಂದ ಪ್ರಸಾದ ತಂದು ಪರಸ್ಪರ ಹಂಚಿಕೊಳ್ಳುತ್ತಾ, ಹಿರಿಯರ ಮಾರ್ಗದರ್ಶನದಲ್ಲಿ ಧಾರ್ಮಿಕತೆಯ ನೆಲೆಯಲ್ಲಿ ಪರಂಪರೆ ಸಂಸ್ಕøತಿ ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆ ಸಣ್ಣ ಮಕ್ಕಳಿಗೆ ಪ್ರೇರಣೆಯು ಸಿಗುತ್ತದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಮಹಿಳೆಯರು ತಿಳಿಸಿದರು.

ಈ ಐದು ದಿನ ಮಕ್ಕಳಿಗೆ ಐತಿಹಾಸಿ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಅರಿವು ಮೂಡುತ್ತದೆ. ಇದರಿಂದ ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಯುತ್ತದೆ ಎಂದು ಮಹಿಳೆಯರು ಹೇಳಿದರು.
ಚಿತ್ರ ಶೀರ್ಷಿಕೆ
21ಎಸ್‍ಎಚ್‍ಪಿ01
ಶಹಾಪುರಃ ಹಳೆಪೇಟೆಯಲ್ಲಿ ದೀಪಾವಳಿ ನಿಮಿತ್ತ ಚಿಣ್ಣರು, ಬಾಲಕಿಯರು ಪಂಚಮಿ ಗಿಂಡಿ (ಕೋಲಾಟ) ಕಾರ್ಯಕ್ರಮದಲ್ಲಿ ಭಾಗವಹಿಸಿದರು.
——-

Related Articles

Leave a Reply

Your email address will not be published. Required fields are marked *

Back to top button