ಪ್ರಮುಖ ಸುದ್ದಿಯೂತ್ ಐಕಾನ್
ಬೆಂಗಳೂರಿನಲ್ಲಿ ಮುಖಂಡ ಸಿದ್ದು ಆರಬೋಳಗೆ ಸನ್ಮಾನ
ಬೆಂಗಳೂರಃ ಕಾಂಗ್ರೆಸ್ ಕಚೇರಿಯಲ್ಲಿ ಆರಬೋಳಗೆ ಸನ್ಮಾನ
ಶಹಾಪುರ; ಎಐಸಿಸಿ ಕಛೇರಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಹಾಗೂ ನೂತನ ನಗರಸಭೆ ಮತ್ತು ಪುರಸಭೆ ಸದಸ್ಯರಾಗಿ ಆಯ್ಕೆಗೊಂಡ ಯುವ ಕಾಂಗ್ರೇಸ್ ಮುಖಂಡರಿಗೆ ಸನ್ಮಾನಿಸುವ ಕಾರ್ಯಕ್ರಮ ಜರುಗಿತು.
ಇದೇ ಸಂದರ್ಭದಲ್ಲಿ ನಗರದ 2 ನೇ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾದ ಸಿದ್ದಪ್ಪ ಆರಬೋಳ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಐಸಿಸಿ ಕರ್ನಾಟಕ ಸ್ಟೇಟ ಇಂಚಾರ್ಜ ಕೃಷ್ಣ ಅಳ್ಳ, ಸ್ಟೇಟ್ ಯುವ ಕಾಂಗ್ರೇಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಸ್ಟೇಟ್ ಯುವ ಕಾಂಗ್ರೇಸ್ ಕಾರ್ಯದರ್ಶಿ ರಾಘವೇಂದ್ರ ಮಾನಸಗಲ್ ಮತ್ತು ಶಹಾಪುರದ ರುದ್ರಣ್ಣ ಚಟ್ರಕಿ, ಶಿವಕುಮಾರ ಯಾದಗಿರಿ, ಸಾಗರ ಗೂಗಲ್ ಸೇರಿದಂತೆ ಇತರರು ಇದ್ದರು.