ಪ್ರಮುಖ ಸುದ್ದಿ
“ಸ್ವೀಟಿ ನನ್ನ ಜೋಡಿ” ಸಿನಿಮಾ ಅಕ್ರಮವಾಗಿ ಯುಟ್ಯೂಬ್ ಗೆ ಅಪ್ ಲೋಡ್- ನಟಿ ರಾಧಿಕ ದೂರು
“ಸ್ವೀಟಿ ನನ್ನ ಜೋಡಿ” ಸಿನಿಮಾ ಯೂಟ್ಯೂಬ್ ಗೆ ಅಕ್ರಮವಾಗಿ ಅಪಲೋಡ್ ಮಾಡಿದ ಕಿಡಿಗೇಡಿಗಳ ಬಂಧನಕ್ಕೆ ನಟಿ ರಾಧಿಕ ಆಗ್ರಹ
ವಿವಿ ಡೆಸ್ಕ್ಃ “ಸ್ವೀಟಿ ನನ್ನ ಜೋಡಿ” ಸಿನಿಮಾವನ್ನು ಅಕ್ರಮವಾಗಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿದ್ದು, ಈ ಕುರಿತು ಪತ್ತೆ ಹಚ್ಚುವಂತೆ ಸಿನಿಮಾದ ನಿರ್ಮಾಪಕಿಯೂ ಆದ, ನಟಿ ರಾಧಿಕ ಕುಮಾರಸ್ವಾಮಿ ಉತ್ತರ ವಿಭಾಗದ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಸಿನಿಮಾವನ್ನು ಪೈರಸಿ ಮಾಡಿರುವ ಖದೀಮರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
2013 ರಲ್ಲಿ ರಾಧಿಕ ಅವರೇ ನಟಿಸಿ ನಿರ್ಮಾಪಕರು ಆಗಿರುವ ಚಿತ್ರ “ಸ್ವೀಟಿ ನನ್ನ ಜೋಡಿ” ಮೂರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಎಂದು ಅವರು ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.