ಬೆಂಕಿ ಮೂಲಕ ಚಿತ್ರ ಬಿಡಿಸಿ ವಿಶ್ವದಾಖಲೆ ನಿರ್ಮಿಸಿದ ಕನ್ನಡ ಕುವರ
ಬೆಂಕಿ ಮೂಲಕ ಚಿತ್ರ ಬಿಡಿಸಿ ವಿಶ್ವದಾಖಲೆ ನಿರ್ಮಿಸಿದ ಕನ್ನಡ ಕುವರ
ದಕ್ಷಿಣ ಕನ್ನಡಃ ಚಿತ್ರ ಬಿಡುಸವಲ್ಲಿ ಹಲವಾರು ವಿಧಗಳನ್ನು ನಾವೆಲ್ಲ ಕಂಡಿದ್ದೇವೆ. ಆದರೆ ಬೆಂಕಿಯಲ್ಲಿ ಚಿತ್ರ ಬಿಡಿಸುವ ಮೂಲಕ ರಾಜ್ಯದ ಯುವಕ ವಿಶ್ವದಾಖಲೆ ನಿರ್ಮಿಸಿರುವ ಸುದ್ದಿ ತಿಳಿದು ಆಶ್ಚಯ ಉಂಟಾಗಿದೆ.
ಹೌದು ಆ ಪ್ರತಿಭಾವಂತನ ಹೆಸರು ಪರೀಕ್ಷಿತ್ ನೆಲ್ಯಾಡಿ. ಅಗ್ನಿ ಚಿತ್ರಕಲೆ (ಫೈರ್ ಆರ್ಟ್)ಯಲ್ಲಿ ಲೈವ್ ಮೂಲಕವೇ ಸ್ವಾಮಿ ವಿವೇಕಾನಂದರ ಚಿತ್ರ ಬಿಡಿಸುವ ಮೂಲಕ ಪರೀಕ್ಷಿತ್ ಸೈ ಎನಿಸಿಕೊಂಡಿದ್ದಾರೆ.
ಬೆಂಕಿ, ಸುಗಂಧ ದ್ರವ್ಯ, ಲಿಂಬೆ ರಸ ಹಾಗೂ ಬ್ರಶ್ ಬಳಸಿ ಬಿಳಿ ಹಾಳೆಯ ಮೇಲೆ ಕೇವಲ 5 ನಿಮಿಷದಲ್ಲಿ ಸ್ವಾಮಿ ವಿವೇಕನಾಂದರ ಚಿತ್ರ ಬಿಡಿಸಿದ್ದ ಅವರಿಗೆ ಎಕ್ಸ್ ಕ್ಲ್ಯೂಸಿವ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಮಾನ್ಯತೆ ನೀಡಿದೆ.
ಜಗತ್ತಿನಾದ್ಯಂತ ಪ್ರತಿಭೆಗಳನ್ನು ದಾಖಲಿಸುತ್ತಿರುವ ಎಕ್ಸ್ ಕ್ಲ್ಯೂಸಿವ್ ವರ್ಲ್ಡ್ ರೆಕಾರ್ಡ್ ಸಂಸ್ಥೆ, ಈ ಬಾರಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಸ್ಪರ್ಧಾಳುಗಳು ತಮ್ಮ ಪ್ರತಿಭೆಗಳನ್ನು ಲೈವ್ ವಿಡಿಯೋ ಮೂಲಕ ಪ್ರಸ್ತುತ ಪಡಿಸಬೇಕಾಗಿತ್ತು. ಪರೀಕ್ಷಿತ್ ಅವರ ಕಲಾ ಪ್ರೌಢಿಮೆ ಪರಿಗಣಿಸಿ ಆ.19 ರಂದು ವರ್ಲ್ಡ್ ರೆಕಾರ್ಡ್ ಘೋಷಿಸಲಾಗಿದೆ.
ನೆಲ್ಯಾಡಿ ಕೌಕ್ರಾಡಿಯ ಸುಧಾಮಣಿ ಮತ್ತು ಶ್ರೀಧರ್ ದಂಪತಿಯ ಪುತ್ರನಾದ ಪರೀಕ್ಷಿತ್ ಪ್ರತಿಭೆಗೆ ಈಗಾಗಲೇ ಹಲವಾರು ಪ್ರಶಸ್ತಿ-ಗೌರವ ಸಂದಿವೆ. ಆ.15ರಂದು ಪೇಪರ್ ಕಟಿಂಗ್ ಆರ್ಟಿಸ್ಟ್ ಎಕ್ಸ್ ಕ್ಲ್ಯೂಸಿವ್ ಟ್ಯಾಲೆಂಟ್ ಅವಾರ್ಡ್ 2020 ಕೂಡ ಲಭಿಸಿದೆ. ಅವರು 2019ರಲ್ಲಿ ಪೇಪರ್ ಕಟಿಂಗ್ ಆರ್ಟ್ನಲ್ಲಿ 3 ನಿಮಿಷ 12 ಸೆಕೆಂಡುಗಳಲ್ಲಿ ಸ್ಟೆನ್ಸಿಲ್ ಆರ್ಟ್ ಬಿಡಿಸುವ ಮೂಲಕ ಕಳೆದ ವರ್ಷ ವಿಶ್ವದ ವೇಗದ ಸ್ಟೆನ್ಸಿಲ್ ಆರ್ಟಿಸ್ಟ್ ದಾಖಲೆ ಬರೆದಿದ್ದರು. ಇದೀಗ ಅಗ್ನಿ ಚಿತ್ರಕಲೆಯಲ್ಲಿ ವಿಶ್ವದಾಖಲೆ ಮಾಡುವ ಮೂಲಕ ಇಡಿ ಕರುನಾಡಿಗೆ ಕೀತಿ ತಂದಿದ್ದಾರೆ. ಸಾಧಕ ಪರೀಕ್ಷಿತ್ ಗೆ ವಿನಯವಾಣಿ ಬಳಗದಿಂದ ಬಿಗ್ ಸೆಲ್ಯೂಟ್.