ಪ್ರಮುಖ ಸುದ್ದಿ
ಜೋಳದ ಬಣಮೆಗೆ ಬೆಂಕಿ 50 ಸಾವಿರ ರೂ.ಹಾನಿ
ಯಾದಗಿರಿಃ ಬೇಸಿಗೆಯಲ್ಲಿ ದನಕರುಗಳಿಗಾಗಿ ಸಂಗ್ರಹಿಸಿಡಲಾಗಿದ್ದ ಜೋಳದ ಬಣಮೆಗೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಜೋಳದ ಮೇವು ಸುಟ್ಟು ಕರಲಾಗದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಬಣಮೆಗೆ ಬೆಂಕಿ ಹೊತ್ತಿ ಉರುಯುತ್ತಿರುವದನ್ನು ಕಂಡ ಗ್ರಾಮಸ್ಥರು ತಕ್ಷಣ ಅಗ್ನಿ ಶಾಮಕ ದಳದವರಿಗೆ ಕರೆ ಮಾಡಲಾಗಿದ್ದು, ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದ್ದಾರೆ.
ಬಣಮೆ ಮಾಲೀಕ ಬಸವಂತ್ರಾಯಗೌಡ ಹೇಳುವ ಪ್ರಕಾರ ಅಂದಾಜು 50 ಸಾವಿರ ರೂ. ಮೌಲ್ಯದ ಜೋಳದ ಮೇವು ಬೆಂಕಿಗೆ ಆಹುತಿಯಾಗಿದೆ. ಬೇಸಿಗೆ ಸಮಯದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಿರಲಿ ಎಂದು ಮುನ್ನೆಚ್ಚರಿಕೆಯಾಗಿ ಸಂಗ್ರಹಿಸಿಡಲಾದ ಮೇವು ಅಗ್ನಿಗೆ ಆಹುತಿಯಾಗಿರುವುದು ರೈತರಲ್ಲಿ ಬೇಸರ ಮೂಡಿದೆ. ಈ ಕುರಿತು ಅಗ್ನಿ ಶಾಮಕದಳದ ಸಿಬ್ಬಂದಿ ಪ್ರಕರಣ ದಾಖಲಿಕೊಂಡಿದ್ದಾರೆ.