ಪ್ರಮುಖ ಸುದ್ದಿ
ಗುಜರಿ ಅಂಗಡಿಗೆ ಬೆಂಕಿ ಅಪಾರ ಹಾನಿ
ಯಾದಗಿರಿಃ ಗುಜರಿ ಅಂಗಡಿಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣ ಹಾನಿಯಾದ ಘಟನೆ ಪಟ್ಟಣದ ಬಸವೇಶ್ವರ ನಗರದಲ್ಲಿ ರವಿವಾರ ಮದ್ಯಾಹ್ನ ನಡೆದಿದೆ. ಗುಜರಿ ಅಂಗಡಿ ಅದೇ ನಗರದ ಜಾವೀದ್ ಎಂಬಾತನಿಗೆ ಸೇರಿದ್ದು, ಬೆಂಕಿ ಹೇಗೆ ಹೊತ್ತಿಕೊಂಡಿದೆ ಎಂಬುದು ತಿಳಿದು ಬಂದಿಲ್ಲ. ಅಂಗಡಿಯಲ್ಲಿ ಅಪಾರ ಪ್ರಮಾಣದ ಸಾಮಾಗ್ರಿಗಳು ಸ್ಟೋರ್ ಮಾಡಲಾಗಿತ್ತು.
ಬೆಂಕಿ ನಂದಿಸಲು ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಸಾಹಸಪಡುವಂತಾಯಿತು. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜೆ. ಮಂಜುನಾಥ ಬೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.