ಜನಮನ

ಶಹಾಪುರ ನಗರಸಭೆಯಲ್ಲಿ ಅರಳಲಿರುವ ಕಮಲ..?

ಶಹಾಪುರ ನಗರಸಭೆ ಗದ್ದುಗೆ ಯಾರ ಪಾಲಾಗಲಿದೆ..?

ಆಡಳಿತರೂಢ ಕಾಂಗ್ರೆಸ್ ವಿರುದ್ಧ ಅಲೆಯೇ ಬಿಜೆಪಿಗೆ ಲಾಭವಾಗಲಿದೆಯೇ.?

ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ನಗರಸಭೆಯ 31 ವಾರ್ಡ್‍ಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಈಗಾಗಲೇ ಮತದಾರರು ನೀಡಿದ ಗೌಪ್ಯ ತೀರ್ಪು ಸುಭದ್ರವಾಗಿ ಇಲ್ಲಿನ ಡಿಗ್ರಿ ಕಾಲೇಜಿನಲ್ಲಿ ಜೋಪಾನವಾಗಿದೆ.

ಇಂದು ಮೇ.31 ಬೆಳಗ್ಗೆ 7 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಚುನಾವಣೆ ಅಧಿಕಾರಿಗಳ ಪ್ರಕಾರ ಬೆಳಗ್ಗೆ 11 ರಿಂದ 12 ಗಂಟೆಯಷ್ಟರಲ್ಲಿ ಎಲ್ಲಾ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ.

ಈ ಬಾರಿ 61.69 ರಷ್ಟು ಮತದಾನವಾಗಿದ್ದು, ಇದು ನಗರಸಭೆಯಾಗಿ ಪರಿವರ್ತನೆಯಾದ ನಂತರ ಪ್ರಥವಾಗಿ ನಡೆದ ನಗರಸಭೆ ಚುನಾವಣೆ ಇದಾಗಿದೆ. ಮೊದಲನೇ ಬಾರಿಗೆ ಅಭ್ಯರ್ಥಿಗಳು ನಗರಸಭೆ ಸದಸ್ಯರಾಗಿ ಆಯ್ಕೆಯಾಗಲಿದ್ದು, ಜನಾಭಿಮತದಂತೆ ಈ ಬಾರಿ ಆಡಳಿತ ವಿರೋಧ ತೀವ್ರವಾಗಿದ್ದು, ಅಲ್ಲದೆ 31 ವಾರ್ಡ್‍ಗಳಲ್ಲಿಯೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರಾ ಹಣಾಹಣಿ ನಡೆದಿದೆ. ಜೆಡಿಎಸ್ ಸಹ 3 ರಿಂದ ನಾಲ್ಕು ಕ್ಷೇತ್ರದಲ್ಲಿ ಪೈಪೋಟಿ ನೀಡಿದೆ.

ರಾಜಕೀಯ ವಿಶ್ಲೇಷಣೆಗಾರರ ಪ್ರಕಾರ ಬಿಜೆಪಿ 12 ರಿಂದ 13 ಸ್ಥಾನ, ಕಾಂಗ್ರೆಸ್ 13 ರಿಂದ 14 ಮತ್ತು ಜೆಡಿಎಸ್ 2 ಹಾಗೂ ಎಸ್‍ಡಿಪಿಐ ಮತ್ತು ಪಕ್ಷೇತರ ತಲಾ 1 ರಂತೆ ಗೆಲುವು ಸಾಧಿಸಲಿವೆ ಎಂಬ ಲೆಕ್ಕಾಚಾರ ನಡೆದಿದೆ.
ಈ ಲೆಕ್ಕಾಚಾರ ಫಲಿಸಿದಲ್ಲಿ ಬಿಜೆಪಿ, ಜೆಡಿಎಸ್ ಬೆಂಬಲದೊಂದಿಗೆ ಈ ಬಾರಿ ನಗರಸಭೆ ಚುಕ್ಕಾಣಿ ಹಿಡಿಯಲಿದೆ ಹೇಳಲಾಗುತ್ತಿದೆ.

ಕಾಂಗ್ರೆಸ್ ಸಂಪೂರ್ಣ ಬಹುಮತ ಬರುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದು, ಬಿಜೆಪಿಯು ಅದೇ ವಿಶ್ವಾದಲ್ಲಿ ಮುಳುಗಿದೆ. ಆದರೆ ಜೆಡಿಎಸ್ ಮಾತ್ರ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಚುಕ್ಕಾಣಿ ಹಿಡಿಯಲು ಬಿಡುವದಿಲ್ಲ.
ಕಳೆದ 25 ವರ್ಷದಿಂದ ನಗರ ಅಭಿವೃದ್ಧಿ ಶೂನ್ಯವಾಗಿದೆ. ಅದೇ ಅಜ್ಜ ಹಾಕಿದ ಆಲದ ಮರ ಕಥೆ ಹೇಳುತ್ತಿದೆ ಕಾಂಗ್ರೆಸ್ ಎಂದು ಜೆಡಿಎಸ್ ಮುಖಂಡರು ಹಿಯಾಳಿಸಿದ್ದಾರೆ. ಒಟ್ಟಾರೆ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರವಾಗಿ ನಗರಸಭೆ ಚುಕ್ಕಾಣಿ ಹಿಡಿಯಲು ತುದಿಗಾಲ ಮೇಲೆ ನಿಂತಂತೆ ಕಾಣುತ್ತಿದೆ.

ಒಟ್ಟಾರೆ ಯಾವುದೇ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದರೂ ತೀವ್ರ ಪೈಪೋಟಿ ನಡುವೆ ಗೆಲ್ಲಲಿರುವುದು ಕಂಡು ಬರಲಿದೆ. ಕೇವಲ 10 ರಿಂದ 50 ಮತಗಳ ಅಂತರದಲ್ಲಿ ಸಾಕಷ್ಟು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎನ್ನಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಮತತು ಜೆಡಿಎಸ್ ದೋಸ್ತಿಗಳಾದರೆ, ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿಗಳಾಗುವದರಲ್ಲಿ ಸಂಶಯವಿಲ್ಲ ಎನ್ನುತ್ತಿದೆ ಜನಾಭಿಪ್ರಾಯ. ಮೇ.31, ಬೆಳಗ್ಗೆ 11 ಗಂಟೆಯಷ್ಟರಲ್ಲಿ ನಗರಸಭೆ ಬಲಾಬಲ ಕುರಿತು ಮಾಹಿತಿ ದೊರೆಯಲಿದೆ. ಅಲ್ಲಿವರೆಗೆ ಕಾದು ನೋಡಿ..

Related Articles

Leave a Reply

Your email address will not be published. Required fields are marked *

Back to top button