ಯಾದಗಿರಿಗೆ “ಮಹಾ” ಕಂಟಕ ಇಂದು 72 ಕೊರೊನಾ ಪಾಸಿಟಿವ್ ಪತ್ತೆ, ಒಟ್ಟು 87 ಕ್ಕೆ ಏರಿಕೆ
ಯಾದಗಿರಿಗೆ “ಮಹಾ” ಕಂಟಕ ಇಂದು 72 ಕೊರೊನಾ ಪಾಸಿಟಿವ್ ಪತ್ತೆ, ಒಟ್ಟು 87 ಕ್ಕೆ ಏರಿಕೆ
ಯಾದಗಿರಿಃ ಜಿಲ್ಲೆಯಲ್ಲಿ ಶನಿವಾರ ಮಹಾ ಕಂಟಕ ತಂದಿದೆ. ಮಹಾರಾಷ್ಟ್ರ ದಿಂದ ಬಂದ ವಲಸಿಗರಲ್ಲಿ ಇಂದು 72 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಮೊದಲಿನ 15 ಸೇರಿ ಜಿಲ್ಲೆಯ ಕೊರೊನಾ ಪಾಸಿಟಿವ್ ಸಂಖ್ಯೆ 87 ಕ್ಕೆ ಏರಿಕೆಯಾಗಿದೆ.
ಶನಿವಾರ ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆಯ ಲ್ಲಿ ಕೊರೊನಾ ಸೋಂಕು ಹೊಂದಿದವರ ಸಂಖ್ಯೆ ತೀವ್ರತೆ ಪಡೆದುಕೊಂಡಿದೆ.
ಮಹಾರಾಷ್ಟ್ರ ದಿಂದ ಬಂದ ವಲಸೆ ಕಾರ್ಮಿಕರು ಜಿಲ್ಲೆಯ ಕ್ವಾರಂಟೈನ್ ನಲ್ಲಿದ್ದವರಲ್ಲಿಯೇ ಸೋಂಕು ಪತ್ತೆಯಾಗಿದೆ. 72 ಹೊಸ ಪ್ರಕರಣಗಳಿದ್ದು, ಇವರ ಸಂಪರ್ಕ ಕ್ಕೆ ಬಂದವರ ಹಿಸ್ಟರಿ ಕಲೆ ಹಾಕಬೇಕಿದೆ ಎಂದು ಅಧಿಕಾರಿಗಳು ತಿಳಿದಿದ್ದಾರೆ.
ಕ್ವಾರಂಟೈನ್ ನಲ್ಲಿ ಇಲ್ಲ ಅಂತರ, ಸ್ವಚ್ಛತೆ ಆರೋಪ
ಮಹಾರಾಷ್ಟ್ರ ದಿಂದ ಬಂದವರಿಗೆ ಕ್ವಾರಂಟೈನ್ ನಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ. ಬೇಕು ಬೇಡವೆಂದು ಅವರನ್ನು ನೋಡಿ ಕೊಳ್ಳಲಾಗುತ್ತಿದೆ. ಮಾಸ್ಕ್ ವಿತರಿಸಿಲ್ಲ, ಇನ್ನು ಸಾಮಾಜಿಕ ಅಂತರ ಕ್ವಾರಂಟೈನ್ ನಲ್ಲಿ ಪಾಲನೆ ಇಲ್ಲ. ಸಮರ್ಪಕವಾಗಿ ನಿಭಾಯಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಗ್ರೀನ್ ಜೋನ್ ಇದ್ದ ಯಾದಗಿರಿಗೆ ಮಹಾರಾಷ್ಟ್ರ ದಿಂದ ವಲಸಿಗ ಕಾರ್ಮಿಕರೇ ಕಂಕಟವಾಗಿದ್ದು, ಜಿಲ್ಲೆಯನ್ನು ಯಾವ ದಿಕ್ಕಿಗೆ ಕೊಂಡೊಯ್ಯುತ್ತಿದೆ ಎಂಬುದು ಜನರಲ್ಲಿ ಆತಂಕ ತಂದಿದೆ.