ಕಲಬುರ್ಗಿಃ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ
ಕಲಬುರ್ಗಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು
ಕಲಬುರ್ಗಿಃ ನಗರದಲ್ಲಿ ಬೆಳಗಿನಜಾವ ಪೊಲೀಸರಿಂದ ಗುಂಡಿನ ದಾಳಿ ನಡೆದ ಘಟನೆ ಜರುಗಿದೆ.
ರೌಡಿ ಶೀಟರ್ ಸೆವೆನ್ ಸ್ಟಾರ್ ಪ್ರದೀಪ್ ಭಾವೆ ಎಂಬಾತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂಸ ಸ್ಥಳ ಪರಿಶೀಲನೆಗಾಗಿ ನಗರದ ಹೊರವಲಯದ ಗ್ರೀನ್ ಸಿಟಿ ಹತ್ತಿರ ಕರೆ ತಂದಾಗ, ರೌಡಿ ಶೀಟರ್ ಪ್ರದೀಪ್ ಪೊಲೀಸರ ಮೇಲೆಯೇ ದಾಳಿ ನಡೆಸಿ ಓಡಿ ಹೋಗಲು ಯತ್ನಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಆತ್ಮರಕ್ಷಣೆಗಾಗಿ ಪ್ರದೀಪ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಎಸ್.ಪಿ.ಶಶಿಕುಮಾರ, ರೌಡಿ ಶೀಟರ್ ಪ್ರದೀಪ್ ಮೇಲೆ ಅಪಹರಣ, ಕೊಲೆ ಯತ್ನ, ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪ ಸೇರಿದಂತೆ ಶ್ರೀಮಂತರ ಮಕ್ಕಳನ್ನು ಅಪಹರಿಸಿ ಅನುಚಿತವಾಗಿ ವರ್ತಿಸಿ ವಿಡಿಯೋ ಮಾಡಿ ಆ ಮಕ್ಕಳ ಪಾಲಕರಿಗೆ ತೋರಿಸಿ ಬೆದರಿಕೆವೊಡ್ಡಿ ಹಣ ವಸೂಲಿ ದಂಧೆ ನಡೆಸುತ್ತಿರುವ ಆರೋಪಗಳು ಸೇರಿದಂತೆ ಒಟ್ಟು 19 ಪ್ರಕರಣಗಳಲ್ಲಿ ದಾಖಲಾಗಿವೆ.
ನಗರದ ಸಾರ್ವಜನಿಕರಿಗಲ್ಲದೆ ಪೊಲೀಸರಿಗೂ ತಲೆನೋವಾಗಿದ್ದ. ಮೀಟರ್ ಬಡ್ಡಿದಂದೆಯಲ್ಲೂ ಆತ ಅನೇಕರಿಗೆ ಕಿರುಕುಳ ನೀಡುತ್ತಿದ್ದ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗ್ರೀನ್ ಸಿಟಿ ಹತ್ತಿರ ಕರೆ ತಂದಾಗ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸುತ್ತಿರುವಾಗ ಪಿಎಸ್ ಐ ರಮೇಶ ಅವರು ಆತನ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪೊಲಿಸ್ ಸಿಬ್ಬಂದಿ ವೆಂಕಟೇಶ ಮತ್ತು ಬಸವರಾಜು ಅವರು ಗಾಯಗೊಂಡಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿ ಶೀಟರ ಪ್ರದೀಪನನ್ನು ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.