ಪ್ರಮುಖ ಸುದ್ದಿ
ಮೀನು ಹಿಡಿಯಲು ಹೋದ ಯುವಕ ಹಳ್ಳಕ್ಕೆ ಬಿದ್ದು ಸಾವು
ಮೀನು ಹಿಡಿಯಲು ಹೋದ ಯುವಕ ಹಳ್ಳಕ್ಕೆ ಬಿದ್ದು ಸಾವು
ದಾಂಡೇಲಿಃ ಮೀನು ಹಿಡಿಯಲು ಹೋದ ಯುವಕನೋರ್ವ ಕಾಲು ಜಾರಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಇಲ್ಲಿನ ಗ್ರಾಮೀಣ ಠಾಣೆ ವ್ಯಾಪ್ತಿಯ ಬೈಲುಪಾರು ದಾಟಿ ಜನತಾ ಕಾಲೊನಿ ಸಮೀಪದ ಸರಕಾರಿ ಶಾಲಾ ಹತ್ತಿರವಿರುವ ಕಿರು ಸೇತುವೆ ಹತ್ತಿರ ಸೋಮವಾರ ನಡೆದಿದೆ.
ನಗರದ ಬೈಲುಪಾರು ನಿವಾಸಿ ನಾಗರಾಜ ಬಾಬುಶಾ (32) ಎಂಬ ಯುವಕನೇ ಮೃತ ದುರ್ದೈವಿ.
ರವಿವಾರ ಮದ್ಯಾಹ್ನ ಮೀನು ಹಿಡಿಯಲೆಂದು ಹಳ್ಳಕ್ಕೆ ಹೋದವ ವಾಪಾಸ್ ಮನೆಗೆ ಬಾರದೆ ಇರುವದರಿಂದ ಸಂಬಂಧಿಕರು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ನಂತರ ಸೋಮವಾರ ಹಳ್ಳದಲ್ಲಿ ಈತನ ಶವ ತೇಲುತ್ತಿರುವದನ್ನು ಗಮನಿಸಿದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.