ಪ್ರಮುಖ ಸುದ್ದಿ
ಮೀನು ಮಾರಾಟಗಾರನಿಗೆ ಕೊರೊನಾ ದೃಢ, ಮೀನು ತಿಂದವರಲ್ಲಿ ಆತಂಕ
ಮೀನು ಮಾರಾಟಗಾರಿನಿಗೆ ಕೊರೊನಾ ದೃಢ
ಮಂಗಳೂರಃ ಮನೆ ಮನೆ ತೆರಳಿ ಮೀನು ಮಾರಾಟ ಮಾಡುತ್ತಿದ್ದ ನಗರದ ಎಕ್ಕೂರ ನಿವಾಸಿಗೆ ಕೊರೊನಾ ಸೋಂಕು ದೃಢವಾಗಿದೆ.
27 ವರ್ಷದ ಸೋಂಕಿತ ಶೀತ ಬಾಧೆಯಿಂದ ಸ್ಥಳೀಯ ಆಸ್ಪತ್ರೆಗೆ ಸ್ವಯಂ ದಾಖಲಾಗಿದ್ದ, ಆ ವೇಳೆ ಕೊವಿಡ್ -19 ಪರೀಕ್ಷೆ ನಡೆಸಿದ್ದು ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಈತ ಮಂಗಳೂರ ಬಂದರಿನಿಂದ ಮೀನು ತಂದು ಮನೆ ಮನೆ ತಿರುಗಿ ಮೀನು ಮರಾಟ ಮಾಡುತ್ತಿದ್ದ ಎನ್ನಲಾಗಿದೆ. ಜಿಲ್ಲಾಡಳಿತ ಈತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯಕೈಗೊಂಡಿದ್ದಾರೆ. ಹೀಗಾಗಿ ಈತನ ಹತ್ತಿರ ಮೀನು ಖರೀದಿ ತಿಂದವರಲ್ಕಿ ಆತಂಕ ದುಗುಡ ಹೆಚ್ವಾಗಿದೆ.