ಪ್ರಮುಖ ಸುದ್ದಿ

ಕುಂಕುಮ ಬಳಸಿ ದರೋಡೆ ಮಾಡುವ ಮಹಿಳೆಯರು ಮನೆಗೆ ಬಂದಾರು ಹುಷಾರ್..!

ವಿಶಿಷ್ಟ ಶೈಲಿಯ ಕಳ್ಳಿಯರು ಮನೆಗೆ ಬಂದಾರು ಹುಷಾರ್..!

ಐವರು ಕಳ್ಳಿಯರ ಕೈಚಳಕ ಮಹಿಳೆಯರಿಂದ ದುಡ್ಡು ಪಡೆದು ಎಸ್ಕೇಪ್

ಯಾದಗಿರಿಃ ಜಿಲೆಯ ಶಹಾಪುರ ನಗರದ ಒಂದು ಅಪಾರ್ಟಮೆಂಟ್‍ಗೆ ನುಗ್ಗಿದ ಐವರು ಮಹಿಳೆಯರು ಒಂದು ಮನೆಯೊಳಗೆ ಹೋಗಿ ಮನೆಯಲ್ಲಿ ಆ ಮಹಿಳೆಗೆ ಕುಂಕುಮ ಹಚ್ಚುವ ಮೂಲಕ ಧಾರ್ಮಿಕವಾಗಿ ನಟನೆ ಮಾಡಿ, ಭವಿಷ್ಯ ಹೇಳುವವರಂತೆ ಮಾತಾಡುತ್ತಾ ನಿಮ್ಮ ಮನೆಯಲ್ಲಿ ಏನ್ ನಡಿತಿದೆ ಮುಂದೇನಾಗುತ್ತೇ ಎಂದು ಹೇಳುತ್ತಲೇ ಮಹಿಳೆಯರನ್ನು ಮಾತಾಡದಂತೆ ಅವರು ಹೇಳಿದ್ದಕ್ಕೆ ಹುಂ ಹುಂ ಎನ್ನುವಂತೆ ಮಾಡುವ ಈ ಕಿರಾತಕ ಮಳ್ಳಿಯರು, ಮನೆಯವರಿಂದಲೇ ದುಡ್ಡು ಬಂಗಾರ ಲೂಟಿ ಮಾಡಿಕೊಂಡು ಎಸ್ಕೇಪ್ ಹಾಗುತ್ತಾರೆ ಹುಷಾರ್ ಇಂತಹ ಮಹಿಳೆಯರು ನಗರದಲ್ಲಿ ಬಂದಿದ್ದು,

ಗುರುವಾರ ಮದ್ಯಾಹ್ನ ಶಹಾಪುರದಲ್ಲಿರುವ ಗಣೇಶ ಅಪಾರ್ಟ್‍ಮೆಂಟ್ ನಲ್ಲಿನ ಎರಡು ಮನೆಗೆ ಹೋಗಿ ಕುಂಕುಮ ಹಚ್ಚುವ ಮೂಲಕ ಅವರ ಮನಸ್ಥಿತಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡು ಅವರ ಪರ್ಸ್ ತರುವಂತೆ ಆಜ್ಞೆ ನೀಡಿದ್ದಾರೆ.

ಪರ್ಸ್‍ನಲ್ಲಿದ್ದ 6500 ರೂ. ತೆಗೆದುಕೊಂಡಿದ್ದು ಅಲ್ಲದೆ, ಮನೆ ಬಾಗಿಲು ಹಾಕಿಕೊಳ್ಳಿ ಎರಡು ಗಂಟೆ ನಂತರ ಮನೆಯ ಬಾಗಿಲು ತೆರೆಯಬೇಕು ಅಲ್ಲಿವರೆಗೆ ಬಾಗಿಲು ತೆರೆಯಬಾರದು ಒಂದು ವೇಳೆ ತೆರೆದದ್ದೆ ಆದರೆ ರಕ್ತ ಕಾರಿಕೊಂಡು ನೀವು ಸಾವನ್ನಪ್ಪುತ್ತೀರಿ ಎಂಬ ಎಚ್ಚರಿಕೆ ನೀಡಿ ಪಕ್ಕದ ಮನೆ ಹೊಕ್ಕಿದ್ದಾರೆ.
ಅಲ್ಲಿಯೂ ಇಂತಹದೆ ನಾಟಕವಾಡಿ ಅಲ್ಲಿಯೂ 3000 ಮತ್ತೊಬ್ಬರಿಂದ 15 ಸಾವಿರೂ. ದುಡ್ಡು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ದುಡ್ಡು ಕಳೆದುಕೊಂಡವರು ಆತಂಕದಿಂದಲೇ ತಿಳಿಸುತ್ತಾರೆ.

ಇನ್ನೊಂದು ಮನೆಯಲ್ಲಿ ಮಹಿಳೆಯೊಬ್ಬರ ಮೈಮೇಲೇ ಇದ್ದ ಬಂಗಾರದ ತಾಳಿ ಕೊಡುವಂತೆ ಕೇಳುತ್ತಿದ್ದರಂತೆ. ಅಷ್ಟರಲ್ಲಿ ಇನ್ನೋರ್ವ ಮಹಿಳೆ ಬಂದಿದ್ದಾರೆ. ಯಾರಿರವು ಎನ್ನುತ್ತಿದ್ದಂತೆ ಆಕೆಗೂ ಧಾರ್ಮಿಕವಾಗಿ ನಟಿಸುತ್ತಲೇ ಏನೋ ದೇವರ ಹೆಸರಿನಿಂದ ಬಡಬಡಾಯಿಸುತ್ತಾ ಹಣೆಗೆ ಕುಂಕಮವಿಟ್ಟಿದ್ದಾರೆ. ಆಕೆಯೂ ಅಷ್ಟಕ್ಕೆ ಮೌನವಹಿಸಿ ತಮ್ಮಲ್ಲಿದ್ದ ನೂರು ರೂಪಾಯಿಯನ್ನು ಆ ಕಳ್ಳ ಮಹಿಳೆಯರ ಕೈಗೆ ನೀಡಿದ್ದಾಳೆ. ಆಗ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅವರು ಅಲ್ಲಿಂದ ಪರಾರಿಯಾಗುತ್ತಿದ್ದಂತೆ 15 ನಿಮಿಷದಲ್ಲಿ ಇವರಿಗೆಲ್ಲ ಅರಿವಿಗೆ ಬಂದಿದೆಯಂತೆ. ವಿಚಿತ್ರವಾದರೂ ನಡೆದ ಸತ್ಯ ಘಟನೆ ಇದಾಗಿದೆ. ದುಡ್ಡು ಕಳೆದುಕೊಂಡವರಲ್ಲಿ ಒಬ್ಬರು ಶಿಕ್ಷಕ ಮನೆಯವರಾಗಿದ್ದಾರೆ. ಇನ್ನೊಬ್ಬರು ಅವರ ಸಂಬಂಧಿಕರೊಬ್ಬರು ಪೊಲೀಸ್ ರಾಗಿರುವ ಕಾರಣ ಘಟನೆ ನಂತರ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ. ಆಗ ಪೊಲೀಸ್ರು ಮನೆ ಹತ್ತಿರ ಬಂದು ವಿಚಾರಿಸಿ ಇಡಿ ನಗರ ಹುಡುಕಿದ್ದಾರೆ ಎಲ್ಲಿಯೂ ಆ ಖತರನಾಕ ಕಳ್ಳಿಯರು ಮಾತ್ರ ಕಣ್ಣಿಗೆ ಬಿದ್ದಿಲ್ಲ.

ಮನೆ ಮಾಲೀಕರ ಬಂದ ಮೇಳೆ ಈ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸುತ್ತೇವೆ ಎಂದು ತಿಳಿಸುವ ದುಡ್ಡು ಕಳೆದುಕೊಂಡವರು, ಮೇಲಾಗಿ ಹೆಚ್ಚಿನದು ಏನು ಹೋಗಿಲ್ಲ ಬಿಡಿ ಬಂಗಾರ ಒಡವೆ ಹೋಗಿದ್ದರೆ ಏನ್ಮಾಡಬೇಕು ಎಂದಕೊಂಡು ಸಮಾಧಾನ ಪಡುತ್ತಿದ್ದಾರೆ.

ಶಹಾಪುರ ನಗರ ಠಾಣೆ ವ್ಯಾಪ್ತಿ ಈ ಘಟನೆ ನಡೆದಿದೆ. ಒಟ್ಟು ಐವರು ಮಹಿಳೆಯರು ಒಂದು ಮಗುವಿದ್ದ ತಂಡ ನಗರಕ್ಕೆ ಬಂದಿದೆ ಎನ್ನಲಾಗಿದೆ. ಇವತ್ತು ಶಹಾಪುರ ನಗರದಲ್ಲಿ ನಡೆದಿರಬಹುದು ನಾಳೆ ನಿಮ್ಮಲ್ಲಿಯೂ ಬರಬಹುದು ಕಾರಣ ಮಹಿಳೆಯರು ಮನೆಯಲ್ಲಿರುವ ಮಹನೀಯರು ಎಚ್ಚರವಹಿಸಬೇಕು. ಜಾಗೃತರಾಗಿ ಯಾರೆ ಮನೆ ಬಾಗಿಲು ಬಡಿದರು ತಕ್ಷಣಕ್ಕೆ ತೆಗೆಯಬೇಡಿ. ಮೊದಲು ಪರಿಚಯಸ್ಥರು ಎಂದು ನೋಡಿದ ಮೇಲೆ ಮಾತನಾಡಿದ ಮೇಲೆ ಬಾಗಿಲು ತೆಗೆಯುವುದು ಒಳಿತು ಎಚ್ಚರ ಎಚ್ಚರ..

Related Articles

Leave a Reply

Your email address will not be published. Required fields are marked *

Back to top button