ಶಹಾಪುರದಲ್ಲಿ ನೆರೆ ಸಂತ್ರಸ್ತರಿಗಾಗಿ ಪರಿಹಾರ ಧನ ಸಂಗ್ರಹ
ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹ
ಯಾದಗಿರಿ, ಶಹಾಪುರಃ ಕರ್ನಾಟಕದಲ್ಲಿ ನೆರೆ ಹಾವಳಿಗೆ ನಲುಗಿದ ಜನರಿಗೆ ಸಹಾಯ ಹಸ್ತ ಚಾಚಿದ ಇಲ್ಲಿನ ಸಮಸ್ತ ನಾಗರಿಕರು ಹಆಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪರಿಹಾರ ನಿಧಿ ಸಂಗ್ರಹಿಸಲಾಯಿತು.
ನೇತೃತ್ವವಹಿಸಿದ್ದ ಕುಂಬಾರಗೇರಿ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಮತ್ತು ಸಿದ್ದೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳ ಮೂಲಕ ಅಂಗಡಿ ಮುಂಗಟ್ಟುಗಲಿಗೆ ತೆರಳಿ ಪರಿಹಾರ ನಿಧಿ ಸಂಗ್ರಹಿಸಲಾಯಿತು.
ಸಾಕಷ್ಟು ಜನರು ಹಣ, ಅಕ್ಕಿ ಮೂಟೆ ಸೇರಿದಂತೆ ಇತರೆ ಆಹಾರ ಸಾಮಾಗ್ರಿಗಳನ್ನು ನೀಡಿದರು. ರವಿವಾರವು ಪರಿಹಾರ ಸಂಗ್ರಹ ಮುಂದುವರೆಯಲಿದೆ ಎಂದು ಉಭಯ ಶ್ರೀಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಅಮ್ಮ ಕ್ಯಾಂಟೀನ್ ನಲ್ಲಿ ಧನ ಸಂಗ್ರಹಕ್ಕಾಗಿ ಸಂಚರಿಸಿ ಎಲ್ಲಾ ಯುವಕರಿಗೆ ಅನ್ನ ದಾಸೋಹವನ್ನು ನೆರವೇರಿಸಿದ್ದರು. ಅಲ್ಲದೆ ಅಮ್ಮ ಕ್ಯಾಂಟೀನ್‍ವತಿಯಿಂದ 1 ಕ್ವಿಂಟಲ್ ಅಕ್ಕಿಯನ್ನು ಸಂತ್ರಸ್ತರಾಗಿ ನೀಡಲಾಯಿತು.
ಈ ಸಂದರ್ಭಲ್ಲಿ ಸುಧೀರ ಚಿಂಚೋಳಿ, ಗುರು ಮಣಿಕಂಠ, ಅರವಿಂದ ಉಪ್ಪಿನ್, ರವಿ ಮೋಟಗಿ, ಸಿದ್ದು ಆನೇಗುಂದಿ, ಮಂಜುನಾಥ ಗಣಾಚಾರಿ, ಬಸವರಾಜ ಯಶ್ ಸೇರಿದಂತೆ ಇತರರಿದ್ದರು.