ಪ್ರಮುಖ ಸುದ್ದಿ
ರಸ್ತೆಬದಿ ನಿಂತವರ ಮೇಲೆ ಟಿಪ್ಪರ್ ಹರಿದು ನಾಲ್ವರು ಸಾವು!
ಕಲಬುರಗಿ : ಜಿಲ್ಲೆಯ ಜೇವರಗಿ ಪಟ್ಟಣದ ಹೊರವಲಯದಲ್ಲಿರುವ ಬಸ್ ಡಿಪೋ ಬಳಿ ರಸ್ತೆ ಬದಿ ನಿಂತವರ ಮೇಲೆ ಟಿಪ್ಪರ ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವಿಗೀಡಾದ ದಾರುಣ ಘಟನೆ ನಿನ್ನೆ ರಾತ್ರಿ ನಡೆದಿದೆ. ಮೃತರು ಆಂಧ್ರಪ್ರದೇಶದ ವೆಲ್ಲೂರು ಮೂಲದವರಾಗಿದ್ದು ಮಗುವಿನ ಜವಳ ಸಮಾರಂಭಕ್ಕಾಗಿ ಬೆಳಗಾವಿ ಜಿಲ್ಲೆಯ ಮುಗಳಖೋಡ ಮಠಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಮಾರ್ಗ ಮದ್ಯೆ ಜೇವರಗಿ ಬಳಿ ಊಟಕ್ಕೆಂದು ಡಾಭಾಕ್ಕೆ ತೆರಳಲೆಂದು ರಸ್ತೆಬದಿ ನಿಂತಿದ್ದರು. ಆದರೆ, ವೇಗಾಗಿ ಬಂದ ಟಿಪ್ಪರ್ ಚಾಲಕ ನಿಯಂತ್ರಣ ತಪ್ಪಿ ರಸ್ತೆಬದಿ ನಿಂತವರ ಮೇಲ ಲಾರಿ ಹರಿಸಿದ್ದಾನೆ. ಪರಿಣಾಮ ಒಂದು ವರ್ಷದ ಮಗು ಸೇರಿ ಲಕ್ಷ್ಮೀ (50), ದಾಸವ್ವ(43), ಸುನೀತಾ (3) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.