ಪ್ರಮುಖ ಸುದ್ದಿ
ಅಯ್ಯೋ ಪಾಪ, ಆ ತಾಯಿ ಹೆತ್ತ ನಾಲ್ಕೂ ಮಕ್ಕಳು ಉಳೀಲಿಲ್ವಂತೆ!
ಬಳ್ಳಾರಿ: ಜುಲೈ 29ರಂದು ತಾಲೂಕಿನ ಎಮ್ಮಿಗನೂರು ಗ್ರಾಮದ ಹುಲಿಗೆಮ್ಮ ಎಂಬ ಮಹಿಳೆ ಬಳ್ಳಾರಿ ನಗರದ ವಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದರು. ಹುಲಿಗೆಮ್ಮ ಅವರ ಗರ್ಭದಲ್ಲಿ ನಾಲ್ಕು ಜೀವಗಳಿರುವುದು ಅರಿತಿದ್ದ ವಿಮ್ಸ್ ಆಸ್ಪತ್ರೆಯ ವೈದ್ಯರು ಹೆಚ್ಚಿನ ಕಾಳಜಿ ವಹಿಸಿದ್ದರು. ಒಂದು ತಿಂಗಳ ಕಾಲ ನಿರಂತರ ಚಿಕಿತ್ಸೆ ನೀಡಿದ್ದರು. ಹೀಗಾಗಿ, ಹುಲಿಗೆಮ್ಮ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಅವಧಿಗೂ ಮುನ್ನ ಜನಿಸಿದ್ದು ಹಾಗೂ ಕಡಿಮೆ ತೂಕವಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಇಂದು ನಾಲ್ಕೂ ಮಕ್ಕಳು ಜೀವಬಿಟ್ಟಿವೆ ಎಂದು ತಿಳಿದುಬಂದಿದೆ.