ದಿ.ಬಸನಗೌಡ ಪಾಟೀಲ್ ಉಕ್ಕಿನಾಳ ಸ್ಮರಣಾರ್ಥ ಉಚಿತ ಆರೋಗ್ಯ ಶಿಬಿರ
ಜ. 25 ರಂದು ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ
ಯಾದಗಿರಿ,ಶಹಾಪುರಃ ದಿ.ಬಸನಗೌಡ ಮಾಲಿ ಪಾಟೀಲ್ ಉಕ್ಕಿನಾಳ ಇವರ ದ್ವಿತೀಯ ಪುಣ್ಯಸ್ಮರಣೆ ಅಂಗವಾಗಿ ಶ್ರೀಬಸನಗೌಡ ಮಾಲಿ ಪಾಟೀಲ್ ಉಕ್ಕಿನಾಳ ಚಾರಿಟೇಬಲ್ ಟ್ರಸ್ಟ್ (ರಿ)ವತಿಯಿಂದ ಜ.25 ರಂದು ಸಮೀಪದ ಭೀಮರಾಯನ ಗುಡಿ ಮಲೇರಿಯಾ ಯುನಿಟ್ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೂ ತಪಾಸಣೆ ನಡೆಯಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.
ಶಿಬಿರದಲ್ಲಿ ಕಣ್ಣಿನ ತಪಾಸಣೆ, ನರರೋಗ, ಹೃದಯರೋಗ, ಕ್ಯಾನ್ಸರ್ ಹಾಗೂ ಇತರೆ ಎಲ್ಲಾ ಸಾಮಾನ್ಯ ಖಾಯಿಲೆಗಳ ತಪಾಸಣೆ ಉಚಿತವಾಗಿ ನಡೆಸಲಾಗುವದು. ಎಚ್.ಸಿ.ಜಿ.ಕ್ಯಾನ್ಸರ್ ಆಸ್ಪತ್ರೆ ಕಲಬುರಗಿವತಿಯಿಂದ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಕಲಬುರ್ಗಿಯ ಅನುಗ್ರಹ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಲಾಗುವದು ಎಂದು ಟ್ರಸ್ಟ್‍ನ ಡಾ.ಮಲ್ಲಣಗೌಡ ಉಕ್ಕಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಶಿಬಿರ ಉದ್ಘಾಟನೆಗೆ ಹಿರಿಯ ನ್ಯಾಯವಾದಿ ಭಾಸ್ಕರರಾವ್ ಮುಡಬೂಳ ಆಗಮಿಸಲಿದ್ದು, ರೈತಪರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸೊನ್ನ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮೀಜಿ ಘನ ಅಧ್ಯಕ್ಷತೆವಹಿಸಲಿದ್ದಾರೆ. ಮತ್ತು ಬೆಂಗಳೂರಿನ ಎಚ್‍ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಶೇಖರ ಪಾಟೀಲ್ ಜೊತೆ ವಿವಿಧ ರೋಗಗಳ ತಜ್ಞರಾದ ಡಾ.ಶಾಂತಲಿಂಗ ನಿಗ್ಗುಡಗಿ. ಡಾ.ರಾಜಶೇಖರ ಹಾಲಕೋಡ, ಡಾ.ಬಿ.ಎಲ್.ಪ್ರಭುಗೌಡ, ಡಾ.ಅನಿಲಕುಮಾರ ಪಾಟೀಲ್, ಡಾ.ಉಮೇಶ್ಚಂದ್ರ, ಡಾ.ಶಂಕರಗೌಡ ಹೊಸಗೌಡ, ಡಾ.ನಂದೀಶಕುಮಾರ ಜೀವಣಗಿ, ಡಾ.ಸಂಗ್ರಾಮ ಬಿರಾದಾರ, ಡಾ.ರಾಜಕುಮಾರ ಎನ್, ಡಾ.ಪುನೀತ ಚಮಕೇರಿ, ಡಾ.ಮಾಲಿನಿ ಪಿ.ಎಲ್, ಡಾ.ಭೀಮರಡ್ಡಿ ಶಹಾಪುರ ಸೇರಿದಂತೆ ಇತರರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ತಾಲೂಕಿನ ಜನತೆ ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.