ಪ್ರಮುಖ ಸುದ್ದಿ
ಮೇ.24 ರಿಂದ 28 ರವರೆಗೆ 4 ದಿನ ಮತ್ತೆ ಸಂಪೂರ್ಣ ಲಾಕ್ ಡೌನ್
ರವಿವಾರ ಬೆಳಗ್ಗೆ 6 ರಿಂದ ಮದ್ಯಾಹ್ನ 2 ಗಂಟೆವರೆಗೆ ದಿನಸಿ, ತರಕಾರಿ ಖರೀದಿಗೆ ಅವಕಾಶ
YADGIRI, ಶಹಾಪುರಃ ಸೋಮವಾರ ಮೇ.24 ರಿಂದ 28 ರವರೆಗೆ ನಾಲ್ಕು ದಿನಗಳ ಕಾಲ ಯಾದಗಿರಿ ಜಿಲ್ಲಾದ್ಯಂತ ಮತ್ತೆ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ತಹಸೀಲ್ದಾರ ಜಗನ್ನಾಥರಡ್ಡಿ ತಿಳಿಸಿದರು.
may 23 ರವಿವಾರ ಬೆಳಗ್ಗೆ 6 ರಿಂದ ಮದ್ಯಾಹ್ನ 2 ಗಂಟೆವರೆಗೆ ತರಕಾರಿ, ದಿನಸಿ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕರು ರವಿವಾರ ದಿನಸಿ, ತರಕಾರಿ ಕೊರೊನಾ ನಿಯಮ ಮೀರದಂತೆ ತೆರಳಿ ಖರೀದಿಸಬೇಕು.
ಸೋಮವಾರದಿಂದ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಜಾರಿ ಇದ್ದು ಯಾರೊಬ್ಬರು ಮನೆ ಬಿಟ್ಟು ಹೊರಗಡೆ ಬರುವಂತಿಲ್ಲ. ಕಾರು, ಬೈಕ್ ಇತರೆ ವಾಹನಗಳೊಂದಿಗೆ ರಸ್ತೆಗಿಳಿದರೆ ದಂಡಾಸ್ತ್ರ ಉಪಯೋಗಿಸಲಾಗುತ್ತಿದೆ. ಅಲ್ಲದೆ ಕಠಿಣ ಕಾನೂನು ಕ್ರಮಕೈಗೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ. ಕಾರಣ ನಾಗರಿಕರು ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕ ಮಹಾಮಾರಿ ತಡೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.