HD ಕುಮಾರಸ್ವಾಮಿ ವಿರುದ್ಧ ಬಿಜೆಪಿ ದೂರು
ಫುಲ್ವಾಮಾ ದಾಳಿ ಮೊದಲೇ ಗೊತ್ತಿತ್ತು ಎಂದಿದ್ದ ಕುಮಾರಸ್ವಾಮಿ ವಿರುದ್ಧ ದೂರು ದಾಖಲು
ಬೆಂಗಳೂರಃ ಫುಲ್ವಾಮಾ ದಾಳಿ ನಡೆಯಲಿದೆ ಎಂಬುದು ತಮಗೆ ಮೊದಲೇ ಗೊತ್ತಿತ್ತು ಎಂದು ಹೇಳಿಕೆ ನಿಡಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ದ ಬಿಜೆಪಿಯ ಎಸ್.ಸಿ.ಮೋರ್ಚಾದಿಂದ ವಿಧಾನಸೌಧ ಪೊಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಇತ್ತೀಚೆಗೆ ಕಾಶ್ಮಿರದ ಫುಲ್ವಾಮಾದಲ್ಲಿ ಉಗ್ರರು ಸಿಆರ್ ಪಿಎಫ್ ಯೋಧರ ವಾಹನವನ್ನು ಸ್ಪೋಟಿಸಿ ಹತ್ಯೆಗೈದ ಉಗ್ರರ ಸಂಚಿನ ಬಗ್ಗೆ ತಮಗೆ ಮೊದಲೇ ಗೊತ್ತಿತ್ತು ಎಂದು ಘಟನೆ ನಡೆದ ಬಳಿಕ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತು ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮತ್ತು ಬಿಜೆಪಿ ಪ್ರಮುಖರು ಇಂದು ಶನಿವಾರ ಸಿಎಂ ವಿರುದ್ಧ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಚಿ.ನ.ರಾಮು, ಭಯೋತ್ಪಾದನೆ ಕೃತ್ಯ ಕುರಿತು ಮೊದಲೇ ತಿಳಿದಿದ್ದರೂ ಉದ್ದೇಶಪೂರ್ವಕ ವಾಗಿ ಮುಚ್ಷಿಟ್ಟಿರುವದು ಅಪರಾಧವಾಗಿದೆ.
ರಾಷ್ಟ್ರೀಯ ಭದ್ರತೆಗೆ ಧಕ್ಕೆ ಪ್ರಮಾಣ ವಚನ ಉಲ್ಲಂಘನೆ ಅಪರಾಧದಡಿ ಐಪಿಸಿ, ರಾಷ್ಟ್ರೀಯ ಭದ್ರತಾ ಕಾಯ್ದೆ, ಭಯೋತ್ಪಾದನೆ ನಿಗ್ರಹ ದಳ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳುಬೇಕೆಂದು ಅವರು ಮನವಿ ಮಾಡಿದ್ದಾರೆ.