ಪ್ರಮುಖ ಸುದ್ದಿ
G7 ಶೃಂಗಸಭೆ : G7 ಸದಸ್ಯನಲ್ಲದ ಭಾರತಕ್ಕೆ ವಿಶೇಷ ಆಹ್ವಾನ!
ನವದೆಹಲಿ : ಅಮೇರಿಕಾ, ಕೆನಡಾ, ಫ್ರಾನ್ಸ್ , ಇಟಲಿ , ಜಪಾನ್ , ಜರ್ಮನಿ ಮತ್ತು ಬ್ರಿಟನ್ ವಿಶ್ವದ ಅಭಿವೃದ್ಧಿ ಹೊಂದಿರ ರಾಷ್ಟ್ರಗಳಾಗಿದ್ದು ಈ ಏಳು ರಾಷ್ಟ್ರಗಳ ಒಕ್ಕೂಟವೇ ಜಿ-7. ಈಸಲದ ಜಿ-7 ಶೃಂಗಸಭೆ ಫ್ರಾನ್ಸ್ ದೇಶದ ಬಿಯರಿಟ್ಜ್ ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದೆ. ಆದರೆ, ಈಸಲದ ಜಿ-7 ಶೃಂಗಸಭೆಯ ವಿಶೇವೇನೆಂದರೆ ಅಭಿವೃದ್ಧಿಯ ದಾಪುಗಾಲು ಇಡುತ್ತಿರುವ ಭಾರತಕ್ಕೆ ವಿಶೇಷ ಆಹ್ವಾನ ನೀಡಲಾಗಿದೆ. ಅಂತೆಯೇ ದಕ್ಷಿಣ ಆಫ್ರಿಕಾ, ಸ್ಪೇನ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೂ ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿದೆ. ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ಮೋದಿ ತೆರಳಿದ್ದು ಹಲವು ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದು ಬಂದಿದೆ.