G7 ಶೃಂಗಸಭೆ : ಮೋದಿ – ಟ್ರಂಪ್ ಮಾತುಕತೆ, ಪಾಕ್ ಗೆ ನಡುಕ!
ನಯವಾಗಿಯೇ ಟ್ರಂಪ್ ಮದ್ಯಸ್ಥಿಕೆ ತಿರಸ್ಕರಿಸಿದ ಮೋದಿ!
ಫ್ರಾನ್ಸ್: ವಿಶೇಷ ಆಹ್ವಾನದ ಮೇಲೆ G7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಈ ವೇಳೆ ಭಾರತ – ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಪ್ರಸ್ತಾಪಿಸಿರುವ ಅಮೇರಿಕಾ ಅದ್ಯಕ್ಷ ಟ್ರಂಪ್ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಮಸ್ಯೆ ಇದೆ. ಎರಡೂ ದೇಶಗಳ ಪ್ರಧಾನಿಗಳ ಜತೆ ಮಾತನಾಡಿದ್ದೇನೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಅಮೇರಿಕಾದಲ್ಲಿ ಭಾರತೀಯರಿಗೆ ಗೌರವದಿಂದ ಕಾಣಲಾಗುತ್ತಿರುವುದಕ್ಕೆ ಟ್ರಂಪ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಭಾರತ – ಪಾಕ್ ನಡುವೆ ದ್ವಿಪಕ್ಷೀಯ ಸಮಸ್ಯೆಗಳಿವೆ. ನಾವು ಒಗ್ಗೂಡಿ ಬಡತನ, ಅನಾರೋಗ್ಯ, ಅನಕ್ಷರತೆ ವಿರುದ್ಧ ಹೋರಾಡಬೇಕಿದೆ. ಭಾರತ – ಪಾಕ್ ಸೇರಿ ದ್ವಿಪಕ್ಷೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಆ ಮೂಲಕ ಮದ್ಯಸ್ಥಿಕೆಯ ಮಾತನಾಡಿದ್ದ ಟ್ರಂಪ್ ಗೆ ನಯವಾಗಿಯೇ ‘ನೋ ಎಂಟ್ರಿ’ ಎಂದು ಮೋದಿ ತಿಳಿಸಿದ್ದಾರೆ. ಅಮೇರಿಕಾ ಬೆಂಬಲದ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ನಡುಕ ಶುರುವಾಗಿದೆ.