ಸುವಾಸನೆ ಭರಿತ ಸ್ಥಳಕ್ಕೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಭೇಟಿ
ಶಹಾಪುರಃ ಸುವಾಸನೆ ಭರಿತ ದರ್ಗಾಕ್ಕೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಭೇಟಿ
ಯಾದಗಿರಿಃ ಕಳೆದ ವರ್ಷ ಡಿಸೆಂಬರ್ 12 ರಂದು ಜಿಲ್ಲೆಯ ಶಹಾಪುರ ನಗರದ ಗಾಜಿ ದರ್ಗಾದ ಸ್ಥಳದಲ್ಲಿ ಮಳಿಗೆ ನಿರ್ಮಾಣ ವೇಳೆ ಬುನಾದಿ ಅಗೆಯುವಾಗ ಸುವಾಸನೆ ಭರಿತದೊಂದಿಗೆ ಭೂಮಿಯೊಳಗಡೆ ‘ಮಜಾರ್’ (ಗೋರಿ)ಯೊಂದು ಪತ್ತೆಯಾಗಿತ್ತು.
ಮಜಾರ್ ಮೇಲಿನ ಮಣ್ಣೆಲ್ಲ ತೆಗೆದಂತೆ ಸುತ್ತಲಿನ ಪ್ರದೇಶ ತುಂಬಾ ಸುವಾಸನೆ ಬೀರಿತ್ತು. ಹೀಗಾಗಿ ಜನ ತಂಡೋಪ ತಂಡವಾಗಿ ಸುವಾಸನೆ ಭರಿತ ಮಣ್ಣನ್ನು ಪ್ಲಾಸ್ಟಿಕ್, ಕಾಗದಲ್ಲಿ ಕಟ್ಟಿಕೊಂಡು ಭಕ್ತಿಯಿಂದ ಪೂಜಿಸಲು ತೆಗೆದುಕೊಂಡು ಹೋದ ವರದಿ ಓದಿದ್ದೀರಿ.
ಅಂದು ಶಹಾಪುರ ತಾಲೂಕು ಆಡಳಿತ ಈ ಅಚ್ಚರಿ ಸುದ್ದಿ ಕೇಳಿ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಮಣ್ಣು ಸಂಗ್ರಹಿಸಿ ಪ್ರಾಚ್ಯ ಇಲಾಖೆಗೆ ವರದಿ ರವಾನಿಸಲಾಗಿತ್ತು.
ಆ ಹಿನ್ನೆಲೆಯಲ್ಲಿ ಶನಿವಾರ ಕಲಬುರ್ಗಿಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅಲ್ಲದೆ ಸಂಗ್ರಹಿಸಿ ಮಣ್ಣನ್ನು ಪರೀಕ್ಷೆ ನಡೆಸಲಾಗುವುದು ಎಂದು ಶಾಂಪಲ್ ತೆಗೆದುಕೊಂಡರು. ಮತು ದರ್ಗಾದ ಮೌಲಾಲಿಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿದರು.
ದರ್ಗಾ ಪತ್ತೆಯಾದ ಸ್ಥಳದ ಚಿತ್ರಗಳನ್ನು ತೆಗೆದುಕೊಂಡ ಅವರು, ಪ್ರಸ್ತುತ ಸುವಾಸನೆ ಬರುತ್ತಿಲ್ಲ ಎಂಬುದನ್ನು ಪ್ರಶ್ನಿಸಿದರು. ಅಲ್ಲದೆ ಮೊದಲಿನ ಮಣ್ಣಿನಲ್ಲಿ ಇನ್ನೂ ಸುವಾಸನೆ ಇರುವದನ್ನು ಗಮನಿಸಿದರು. ಅಲ್ಲದೆ ಮಜಾರ್ ಪತ್ತೆಯಾದಾಗ ಅದರ ಮೇಲೆ ಸಿಮೆಂಟ್ ಕಾಂಕ್ರೆಟ್ ಹಾಕಲಾಗಿತ್ತು. ಬುನಾದಿ ಅಗೆಯುವಾಗ ಅದು ಗೋಚರಿಸಿದ್ದು, ನಂತರ ಸುತ್ತಲು ಅಗೆದು ಮಜಾರ್ ಹೊರಗಡೆ ಕಾಣುವಂತೆ ಮಾಡಲಾಗಿದೆ. ಅಚ್ಚರಿ ಎಂದರೆ ಮಜಾರ್, ಭೂಮಿ ತೋಡುವಾಗ ಇದ್ದ ಸಮತಟ್ಟಾದ ಸ್ಥಳಕ್ಕಿಂತ ಎತ್ತರಕ್ಕೆ ಬಂದಿರುವುದು ಹಲವರಲ್ಲಿ ಕುತುಹಲ ಮೂಡಿಸಿದೆ ಎನ್ನುತ್ತಾರೆ ರಫೀಕ್ ಕಂಠಿ.
ಈ ಎಲ್ಲಾ ಭಕ್ತರ ಮತ್ತು ದರ್ಗಾದ ಪ್ರಮುಖರ ವಿಚಾರ, ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿಹಾಕುತ್ತಿದ್ದಾರೆ. ತಂಡದಲ್ಲಿ ಅನ್ವೇಷಣೆಗಾರರಾದ ಶಿವಪ್ರಕಾಶ, ಶಬ್ಬೀರ ಅಹ್ಮದ್ ಮತ್ತು ಸ್ಥಳೀಯ ಕಂದಾಯ ಇಲಾಖೆಯ ಸಂಗಮೇಶ ಮದ್ರಿಕಿ, ಓಂಪ್ರಕಾಶ ಇದ್ದರು.
————-
ದರ್ಗಾ ಭೂಮಿಯಲ್ಲಿ ದೊರೆತಿರುವ ಬಗ್ಗೆ ತಾಲೂಕು ಆಡಳಿತ ವರದಿ ಸಲ್ಲಿಸಿದೆ. ಮಣ್ಣು ಪರೀಕ್ಷೆಗೆ ಅಂದೇ ಕಳುಹಿಸಿದ್ದರೆ. ಚನ್ನಾಗಿತ್ತು. ಈಗ ಈ ಮಣ್ಣಿನ ಪರೀಕ್ಷೆ ಮಾಡಲಾಗುವುದು. ಕಲಬುರ್ಗಿಯಲ್ಲಿ ಪರೀಕ್ಷೆ ನಡೆಸಲಾಗುವುದು. ಸಮರ್ಪಕ ಮಾಹಿತಿ ತಿಳಿಯದಿದ್ದಲ್ಲಿ. ಮಣ್ಣನ್ನು ಮೈಸೂರಿನ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುವುದು.
–ಶಿವಪ್ರಕಾಶ ಅನ್ವೇಷಣೆಗಾರರು. ಪ್ರಾಚ್ಯವಸ್ತು ಇಲಾಖೆ. ಕಲಬುರ್ಗಿ.