ಪ್ರಮುಖ ಸುದ್ದಿ
ಬಳ್ಳಾರಿಗೆ ತೆರಳಲು ರಡ್ಡಿಗೆ ಸಿಕ್ತು ಅನುಮತಿ.!
ರಡ್ಡಿ ಬಳ್ಳಾರಿಗೆ ಮರಳಲು ಸುಪ್ರೀಂ ಅನುಮತಿ ಕೊಟ್ಟಿದ್ದೇಕೆ..?
ವಿನಯವಾಣಿ ಡೆಸ್ಕ್ಃ ಅಕ್ರಮ ಗಣಿಗಾರಿಕೆ ಪ್ರಕರಣದಡಿ ಗಾಲಿ ಜನಾರ್ಧನ ರಡ್ಡಿ ಕಳೆದ 6 ವರ್ಷದಿಂದ ವನವಾಸ ಅನುಭವಿಸುತ್ತಿದ್ದರು.
ಪ್ರಸ್ತುತ ಬೇಲ್ ಮೇಲೆ ಹಲವು ಷರತ್ತುಬದ್ಧ ಜಾಮೀನು ಪಡೆದು ಹೊರಗಡೆ ಇದ್ದರು. ಆದರೆ ಸುಪ್ರೀಂಕೋರ್ಟ್ ಅವರ ತವರೂರಾದ ಬಳ್ಳಾರಿಗೆ ಹೋಗುವಂತಿಲ್ಲ ಎಂಬ ಷರತ್ತು ಹೊರಡಿಸಲಾಗಿತ್ತು.
ಆದರೆ ಇಂದು ಸುಪ್ರೀಂಕೋರ್ಟ್ ರಡ್ಡಿಯವರಿಗೆ ತನ್ನ ತವರು ಬಳ್ಳಾರಿಗೆ ಹೋಗಲು ಅನುಮತಿ ನೀಡಿದೆ.
ಆದರೆ ಅದು ಜೂ.8 ರಿಂದ ಎರಡು ವಾರ ಮಾತ್ರ ಅನುಮತಿ ನೀಡಿ ಆದೇಶಿಸಿದೆ.
ಕಾರಣ ರಡ್ಡಿಯವರ ಸಂಬಂಧಿಯೊಬ್ಬರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುವ ಹಿನ್ನೆಲೆಯಲ್ಲಿ ರಡ್ಡಿಪರ ವಕೀಲರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ 2 ವಾರಗಳ ಕಾಲ ಬಳ್ಳಾರಿಯಲ್ಲಿ ಇರಲು ಸಂಚಾರಕ್ಕೆ ಅನುಮತಿ ನಿಡಿದೆ ಎನ್ನಲಾಗಿದೆ.
ಹೀಗಾಗಿ ರಡ್ಡಿ ಸಂಬಂಧಿಕರು ಹಾಗೂ ಆಪ್ತರಲ್ಲಿ ಮತ್ತು ಅಭಿಮಾನಿಗಳಲ್ಲಿ ಸಂತಸ ವ್ಯಕ್ತವಾಗಿದೆ.