ಅವರಾತ್ರಿ ಗಾನಯಾನ ಸುಮಧುರ ಗೀತೆಗಳ ಭಾವಯಾನ
ಕನ್ನಡ ಸುಮಧುರ ಗೀತೆಗಳ ಭಾವಯಾನ
ಯಾದಗಿರಿಃ ನಾಡಿನಲ್ಲಿ ಕನ್ನಡ ಕಲಾವಿದರನ್ನು ಬೆಳೆಸುವ ಪ್ರೋತ್ಸಾಹಿಸುವ ಅಗತ್ಯವಿದೆ. ಕರ್ನಾಟಕದ ಕನ್ನಡಾಭಿಮಾನಿ ಕಲಾವಿದರಿಗೆ ಸರ್ಕಾರ ಪ್ರೋತ್ಸಾಹಿಸ ನಿಟ್ಟಿನಲ್ಲಿ ಹಲವು ಯೋಜನಾರ್ಥವಾಗಿ ವಿವಿಧ ಕಾರ್ಯಕ್ರಮಗಳನ್ನು ಜಿಲ್ಲಾಡಳಿತವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಇವುಗಳ ಸದುಪಯೋಗವನ್ನು ಸಾರ್ವಜನಿಕರು ಕಲಾವಿದರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಹೇಳಿದರು.
ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ರಾತ್ರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತವತಿಯಿಂದ ಬೆಂಗಳೂರಿನ ವಿಶ್ವ ಕಲಾನಿಕೇತನ ತಂಡದಿಂದ ಗಾನಯೋಗ ಸುಮಧುರ ಕನ್ನಡ ಚಲನಚಿತ್ರಗಳ ಭಾವಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಗೀತೆಗಳು ಮನಸ್ಸಿಗೆ ಮುದ ನೀಡುವಂತವು, ಅದು ತಾಯಿ ಭಾಷೆ. ಕನ್ನಡ ಕಲಾವಿದರು ಕನ್ನಡ ಭಾಷೆ ಮೇಲೆ ಸಾಕಷ್ಟು ಹಿಡಿತ ಹೊಂದಿದ್ದರೆ ಮಾತ್ರ ಅವರಿಗೆ ಹಾಡಲು ಮತ್ತು ಭಾಷಣ ಮಾಡಲು ಸುಲಭ ಸಾಧ್ಯವಿದೆ. ಕಲಾವಿದರ ಪ್ರೋತ್ಸಾಹ ಹಿನ್ನೆಲೆಯಲ್ಲಿ ಈ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕಿದೆ. ಇದಕ್ಕೆ ಜಿಲ್ಲಾಡಳಿತ ಸಹಕಾರಿ ಇದೆ. ಕನ್ನಡ ಸುಮಧುರ ಗೀತೆಗಳನ್ನು ಕೇಳು ಕನ್ನಡಗರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಿತ್ತು. ಆದರೆ ಜನಸಂಖ್ಯೆ ಸೇರದಿರುವುದು ತುಸು ಬೇಸರ ತಂದಿದೆ. ಕನ್ನಡದ ಕಾರ್ಯಕ್ರಮವನ್ನು ಕನ್ನಡಿಗರೇ ಸೇರದಿದ್ದರೆ ಹೇಗೆ.? ಎಂದರು.
ಉಕ ಕರವೇ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಹೆಸರಾಂತ ಕಲಾವಿದರು ಕಾರ್ಯಕ್ರಮ ಆಗಮಿಸಿರುವುದು ಸಂತಸ ತಂದಿದೆ. ಸಾರ್ವಜನಿಕರು ಗಾಯಕರ ಗಾಐನ ಕೇಳುವ ಮೂಲಕ ಸುಮಧೂರ ಗೀತೆಗಳನ್ನು ಅವರ ಧ್ವನಿ ಮೂಲಕ ಕೇಳಿ ಆನಂದಿಸಬೇಕು. ಉತ್ತಮ ಗಾಯಕ ಗಾಯಕಿಯರು ಇಲ್ಲಿದ್ದಾರೆ. ಬೆಂಗಳೂರಿನಿಂದ ಕಲಾವಿದರು ಬಂದಿದ್ದು, ಗಾನಯಾನದ ಮೂಲಕ ಭಾವಯಾನದಲ್ಲಿ ತೇಲಿಸಲು ಬಂದಿದ್ದಾರೆ. ಸದ್ಯ ಎಲ್ಲರೂ ಗಾನನೌಕೆಯಲ್ಲಿ ಕುಳಿತಿದ್ದೀವಿ. ಈ ನೌಕೆಯನ್ನು ನಡೆಸಬಲ್ಲ ಬೆಂಗಳೂರಿನ ಕಲಾವಿದರು ನಮ್ಮನ್ನು ಯಾವ ನಗೆಗಡಲು ಮತ್ತು ಸಂತಸಗಡಲಿಗೆ ಕರೆದೊಯ್ಯುತ್ತಾರೆ ಎಂಬುದನ್ನು ನೋಡೋಣ. ಮತ್ತು ಜಿಲ್ಲಾಡಳಿತ ವಾರ್ತಾ ಇಲಾಖೆಯವರು ಆಶ್ರಯದಲ್ಲಿ ಕೈಗೊಂಡ ಕಾರ್ಯಕ್ರಮ ಕಲಾವಿದರಿಗೆ ನಿಜಕ್ಕೂ ಸಂತಸ ಮೂಡಿಸಿದೆ. ಈ ಭಾಗದಲ್ಲಿ ಕಲಾವಿದರ ಹಿಗ್ಗು ಹಿಮ್ಮಡಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಪತ್ರಕತ್ರ ಅನಿಲ ದೇಶಪಾಂಡೆ ಇತರರಿ ಉಪಸ್ಥಿತರಿದ್ದರು. ಮತ್ತು ಹೆಸರಾಂತ ಕಲಾವಿದರಾದ ಅಮಿತ್, ಪಾರ್ಥ್, ಮಂಜುಶ್ರೀ ಮತ್ತು ದಿವ್ಯ ಅವರು ಕನ್ನಡ ಗೀತೆಗಳನ್ನು ಹಾಡುವ ಮೂಲಕ ನೆರೆದ ಜನರನ್ನು ರಂಜಿಸಿದರು. ವಿದ್ಯಾಮಂಗಲದಿಂದ ಗಾನನೌಕೆ ಮೂಲಕ ಭವಸಾಗರವ ಸುತ್ತಿಸಿದರು.