ಕಾವ್ಯ

ನೋವು ತಾಳದ ಹೃದಯ..! ಕಾಸೆ ಬರೆದ ಗಜಲ್

ಪ್ರೀತಿಯ ಮೋಸದಾಟ ಸಂಕಟದಲ್ಲಿ ಹೃದಯ, ನೋವು ಉಪಯುಕ್ತವಾಗಲಿ

ಮುಖ್ಯವೆನಿಸುವ ಒಂದು ಪಡೆಯಲು ಬಿಡುವ ಇನ್ನೊಂದು ಸಹಜ ಗುಣ/
ಬಯಸದೆ ಏನನ್ನು ಆಗಿದ್ದ ಅನಿವಾರ್ಯ ಬಿಟ್ಟು ಕೊಟ್ಟ ಮನ ತ್ಯಾಗದ ಕಣ//

ನಮಗೆ ಏನಿರದಿದ್ದರೂ ಇರಲಿ ನಮ್ಮವರು ಚೆನ್ನಾಗಿ ಆಶಿಸಿ ಮೇಲೆ ನಕ್ಕಿದೆ ಜೀವ/
ಆಂತರ್ಯದಲ್ಲಿ ತಾಳದ ಸಂಕಟ ಹೇಳದೆ ನಡೆಸಿದೆ ವಿಲ ವಿಲ ಒದ್ದಾಟದ ಗಾಣ//

ಮೊದಲ ರಾತ್ರಿ ಹಾಲೊಂದಿಗೆ ಬಂದ ನಲ್ಲೆ ಮಾತು ಕೇಳಿ ಕ್ಷಣ ಬಿದ್ದೆದ್ದ ನಲ್ಲ/
ಆಸೆಗಳು ಜಾರಿ ಗೌಣವೆನಿಸಿ ಸೆಳೆತ ದಾಹವಾದ ಮೋಹ ಆಯಿತು ತೃಣ//

ಹೆಂಡತಿ ಮಕ್ಕಳು ಬಿಟ್ಟು ಹೋದವರು ಎಷ್ಟು ಮತ್ತೆ ಬಾರದೆ ದೇಶ ಸೇವೆಗೆಂದು/
ಮೊದಲ ಸಮಾನ ವೇದನೆ ಈಗ ಹಿರಿಯ ಜೀವವೊಂದು ಹಿಡಿದಿದೆ ಪ್ರಾಣದ ಋಣ//

ಏನನ್ನು ಕೇಳಿ ಪಡೆಯಲಾಗದು ಇಲ್ಲಿ ಇರಬೇಕು ಪ್ರೀತಿ ವಿಶ್ವಾಸಗಳ ಚಂದಿರ/
ನಿರ್ದಿಷ್ಟ ಹಿತಕ್ಕಾಗಿ ಸಹಿಸಿ ವ್ಯಯಿಸುವ ನೋವು ಆಗಲಿ ಉಪಯುಕ್ತ ಚರಣ//

ಬಸವರಾಜ ಕಾಸೆ

Related Articles

2 Comments

  1. ಯುವಸಮುದಾಯದಲ್ಲಿ ಪ್ರೀತಿಯ ಬಗ್ಗೆ ನಿರಾಸೆ ಭಾವನೆಗಳು ಹೆಚ್ಚಾಗುತ್ತಿರುವುದು ವಿಷಾದನೀಯ.

Leave a Reply

Your email address will not be published. Required fields are marked *

Back to top button