Homeಪ್ರಮುಖ ಸುದ್ದಿ

ಗೇಮಿಂಗ್‌ ಝೋನ್​ನಲ್ಲಿ ಅಗ್ನಿ ಅವಘಡ ಕೇಸ್‌ : ಮಕ್ಕಳು ಸೇರಿದಂತೆ ಸಾವಿನ ಸಂಖ್ಯೆ 32ಕ್ಕೆ ಏರಿಕೆ

ಗುಜರಾತ್‌: ರಾಜ್‌ಕೋಟ್‌ನ ಗೇಮಿಂಗ್‌ ಝೋನ್​ನಲ್ಲಿ ಭಾರೀ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗಿದೆ. 9 ಮಕ್ಕಳು ಸೇರಿ ಒಟ್ಟು 32 ಜನರು ಸಾವನ್ನಪ್ಪಿರುವ ಮಾಹಿತಿ ಇದೀಗ ತಿಳಿದು ಬಂದಿದೆ.

ಘಟನೆಯಲ್ಲಿ ಬೆಂಕಿಯಿಂದ ಸುಟ್ಟು ಹೋದವರ ಮೃತದೇಹಗಳನ್ನು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಡ್​ಶೀಟ್​ ಹಾಗೂ ಮೂಟೆಯಲ್ಲಿ ಕಟ್ಟಿಕೊಂಡು ಹೊರಕ್ಕೆ ತಂದಿದ್ದರು. ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ ಹಾಗಾಗಿ ಗುರುತು ಸರಿಯಾಗಿ ಗೊತ್ತಾಗುತ್ತಿಲ್ಲ. ಎಲ್ಲ ಮೃತದೇಹಗಳ ಡಿಎನ್​ಎ ಪರೀಕ್ಷೆ ಮಾಡಿ ಅವರವರ ಕುಟುಂಬಗಳಿಗೆ ಅಸ್ತಾಂತರ ಮಾಡಲಾಗುವುದು. ಇನ್ನು ಘಟನೆಯಲ್ಲಿ ಗಾಯಗೊಂಡವರ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ನಿನ್ನೆಯಿಂದಲೂ ರಕ್ಷಣಾ ಕಾರ್ಯ ಇದುವರೆಗೂ ನಡೆಯುತ್ತಿದೆ ಎಂದು ಎಸಿಪಿ ವಿನಾಯಕ ಪಟೇಲ್ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button